Astrology
ಈ ಜಗತ್ತಿನಲ್ಲಿ ಯಾರೆಲ್ಲ ಕೃಷ್ಣನ ಪ್ರತಿನಿಧಿಗಳಾಗಿದ್ದಾರೆ; ಭಗವದ್ಗೀತೆಯ ಈ ಶ್ಲೋಕದಲ್ಲಿ ಅಡಗಿರುವ ಸತ್ಯ ತಿಳಿಯಿರಿ

ಅವು ಕೃಷ್ಣನ ಪ್ರತಿನಿಧಿಗಳು. ಮನುಷ್ಯರಲ್ಲಿ ರಾಜನು ಕೃಷ್ಣನ ಪ್ರತಿನಿಧಿ, ಏಕೆಂದರೆ ಕೃಷ್ಣನು ವಿಶ್ವವನ್ನು ಪಾಲಿಸುತ್ತಾನೆ. ತಮ್ಮ ದೈವಭಕ್ತಿ ಮತ್ತು ಧಾರ್ಮಿಕ ಗುಣಗಳಿಗಾಗಿ ನೇಮಿತರಾದ ರಾಜರು ತಮ್ಮ ರಾಜ್ಯಗಳ ಪಾಲಕರು. ಮಹಾರಾಜ ಯುಧಿಷ್ಠಿರ, ಮಹಾರಾಜ ಪರೀಕ್ಷಿತ್ ಮತ್ತು ಶ್ರೀರಾಮನಂತಹ ರಾಜರು ಬಹುಧರ್ಮಿಷ್ಟ ಅರಸರಾಗಿದ್ದರು ಮತ್ತು ಸದಾ ಪ್ರಜೆಗಳ ಯೋಗಕ್ಷೇಮವನ್ನು ಕುರಿತು ಚಿಂತಿಸುತ್ತಿದ್ದರು. ವೇದ ಸಾಹಿತ್ಯದಲ್ಲಿ ರಾಜನನ್ನು ದೇವರ ಪ್ರತಿನಿಧಿ ಎಂದು ಪರಿಗಣಿಸಿದೆ. ಆದರೆ ಈ ಯುಗದಲ್ಲಿ, ಧಾರ್ಮಿಕ ತತ್ವಗಳು ಭ್ರಷ್ಟವಾಗಿ, ರಾಜತ್ವವು ಕ್ಷೀಣಗತಿಗೆ ಬಂದಿತು. ಈಗ ಕೊನೆಗೊಂಡಿದೆ. ಆದರೆ ಹಿಂದಿನ ಕಾಲದಲ್ಲಿ ಧರ್ಮಿಷ್ಠ ರಾಜರ ಆಳ್ವಿಕೆಯಲ್ಲಿ ಜನರು ಇನ್ನೂ ಸುಖವಾಗಿದ್ದರು ಎಂದು ತಿಳಿದುಕೊಳ್ಳಬೇಕು.