Latest Kannada Nation & World
ಕೇಂದ್ರ ಬಜೆಟ್ ದಿನವೇ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಇಳಿಕೆ, ನಗರವಾರು ಎಲ್‌ಪಿಜಿ ದರ ವಿವರ

ದೆಹಲಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 7 ರೂ.ಗಳಿಂದ 1,797 ರೂ.ಗಳಿಗೆ ಇಳಿಸಲಾಗಿದೆ. ಬೆಲೆ ಕಡಿತವು ತಮ್ಮ ದೈನಂದಿನ ಕಾರ್ಯಾಚರಣೆಗಳಿಗಾಗಿ ಎಲ್‌ಪಿಜಿಯನ್ನು ಹೆಚ್ಚು ಅವಲಂಬಿಸಿರುವ ವ್ಯವಹಾರಗಳಿಗೆ ಪರಿಹಾರವನ್ನು ನೀಡುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಇಂದು 1,874 ರೂಪಾಯ ಇದೆ. ನಿನ್ನೆಗೆ ಹೋಲಿಸಿದರೆ 6 ರೂಪಾಯಿ ಇಳಿಕೆಯಾಗಿದೆ. ವಾಣಿಜ್ಯ ಎಲ್‌ಪಿಜಿ 47.5 ಕೆಜಿ ಸಿಲಿಂಡರ್ ದರ 15 ರೂಪಾಯಿಯಷ್ಟು ಕಡಿಮೆಯಾಗಿದೆ. ಮೆಟ್ರೋ ನಗರಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರ ಎಷ್ಟಿದೆ ಎಂಬ ವಿವರ ಮುಂದೆ ನೀಡಲಾಗಿದೆ.