Latest Kannada Nation & World
ಕೇಂದ್ರ ಬಜೆಟ್ 2025 ಮಂಡನೆಗೆ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮೊಸರು ಸಕ್ಕರೆ ತಿನಿಸಿದ ರಾಷ್ಟ್ರಪತಿ ಮುರ್ಮು

Union Budget 2025: ಸಂಸತ್ತಿನಲ್ಲಿ ಫೆಬ್ರವರಿ 1 ರ ಶನಿವಾರದಂದು ತನ್ನ 8ನೇ ಕೇಂದ್ರ ಬಜೆಟ್ ಮಂಡಿಸುವ ಮೊದಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಡಿಕೆಯಂತೆ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ದಹಿ- ಚೀನಿ (ಮೊಸರು – ಸಕ್ಕರೆ) ತಿನಿಸಿದರು. ಕೇಂದ್ರ ಬಜೆಟ್ ಮಂಡನೆಗೆ ಮೊದಲು ನಡೆಯುವ ಸಂಪ್ರದಾಯ ಇದಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಶುಭಕೋರಿದರು.