Astrology
ವರಗಳನ್ನು ನೀಡುವ ಶಕ್ತಿ ದೇವತೆಗೆ ನಿತ್ಯ ಪೂಜೆ; ಬೆಂಗಳೂರಿನ ಆರ್‌ಆರ್ ನಗರದ ನಿಮಿಷಾಂಬ ದೇವಿಯ ನವರಾತ್ರಿ ಅಲಂಕಾರ, ಮಹತ್ವ ತಿಳಿಯಿರಿ

ನಿಮಿಷಾಂಬ ದೇವಿಗೆ ನವರಾತ್ರಿಯ ಅಲಂಕಾರ ಹೇಗಿದೆ
2024ರ ಅಕ್ಟೋಬರ್ 3 ರಿಂದ ನವರಾತ್ರಿ ಆರಂಭವಾಗಿದೆ. ಅಂದಿನಿಂದಲೇ ದೇವಿಗೆ ಅಲಂಕಾರಗಳನ್ನು ಮಾಡುತ್ತಾ ಬರಲಾಗಿದೆ. ನವರಾತ್ರಿಯ ಮೊದಲ ದಿನ (ಅಕ್ಟೋಬರ್ 3, ಗುರುವಾರ) ಮಧುಮಗಳ ಅಲಂಕಾರ, 2ನೇ ದಿನ (ಅಕ್ಟೋಬರ್ 4, ಶುಕ್ರವಾರ) ಗಾಯಿತ್ರಿ ಅಲಂಕಾರ, 3ನೇ ದಿನ (ಅಕ್ಟೋಬರ್ 5, ಶನಿವಾರ) ನಾರಾಯಣಿ ಅಲಂಕಾರ, 4ನೇ ದಿನ (ಅಕ್ಟೋಬರ್ 6, ಭಾನುವಾರ) ಕೋಲ್ಹಾಪುರ ಮಹಾಲಕ್ಷ್ಮಿ ಅಲಂಕಾರ, 5ನೇ ದಿನ (ಅಕ್ಟೋಬರ್ 7, ಸೋಮವಾರ) ಕಂಚಿಕಾಮಾಕ್ಷಿ ಅಲಂಕಾರ, 6ನೇ ದಿನ (ಅಕ್ಟೋಬರ್ 8, ಮಂಗಳವಾರ) ಸ್ಕಂದಮಾತಾ ದೇವಿ ಅಲಂಕಾರ, 7ನೇ ದಿನ (ಅಕ್ಟೋಬರ್ 9, ಬುಧವಾರ) ವೀಣಾ ಸರಸ್ವತಿ ಅಲಂಕಾರ, 8ನೇ ದಿನ (ಅಕ್ಟೋಬರ್ 10, ಗುರುವಾರ) ದುರ್ಗಾ ದೇವಿ ಅಲಂಕಾರ, 9ನೇ ದಿನ (ಅಕ್ಟೋಬರ್ 11, ಶುಕ್ರವಾರ) ಅನ್ನಪೂರ್ಣ ದೇವಿ ಅಲಂಕಾರ ಹಾಗೂ 10ನೇ ದಿನ ಅಂದರೆ ವಿಜಯದಶಮಿಯಂದು ತ್ರಿಪುರಾ ಸುಂದಿಯ ಅಲಂಕಾರವನ್ನು ದೇವಿಗೆ ಮಾಡಲಾಗುತ್ತದೆ. ದೇವಾಲಯದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.