Latest Kannada Nation & World
ಕೇವಲ ಹದಿನೈದು ದಿನಕ್ಕೆ ಒಟಿಟಿಗೆ ಬಂದ ತಮಿಳಿನ ಬ್ಲಾಕ್‌ಬಸ್ಟರ್ ಅಮರನ್ ಸಿನಿಮಾ! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ

Amaran OTT: ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ಒಟಿಟಿಗೆ ಪದಾರ್ಪಣೆ ಮಾಡಿದೆ. ಬಯೋಪಿಕ್ ವಾರ್ ಡ್ರಾಮಾ ಶೈಲಿಯ ಈ ಸಿನಿಮಾ ಶುಕ್ರವಾರದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಭಾರತೀಯ ಒಟಿಟಿ ಪ್ರೇಕ್ಷಕರು ಅಮರನ್ ಸಿನಿಮಾವನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ, ಅಮರನ್ ಸಿನಿಮಾ ಸಾಗರೋತ್ತರ ಒಟಿಟಿಯಾದ ಐಂತುಸನ್‌ನಲ್ಲಿ (Einthusan OTT) ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ವಾರಗಳಲ್ಲಿ, ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಚ್ಚರಿ ವಿಚಾರ ಏನೆಂದರೆ, ಈ ಸಿನಿಮಾ ಕೇವಲ ತಮಿಳು ಆವೃತ್ತಿ ಮಾತ್ರ ಬಿಡುಗಡೆಯಾಗಿದೆ.