Latest Kannada Nation & World
ಕೊನೆಯ ಎಸೆತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ರೋಚಕ ಜಯ; ಶುಭಾರಂಭದ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್ಗೆ ನಿರಾಸೆ

ಈ ವೇಳೆ ರಣ ಚಂಡಿಯಾದ ಹರ್ಮನ್, ಅರ್ಧಶತಕದ ಗಡಿಯಲ್ಲಿ (42 ರನ್, 22 ಎಸೆತ, 4 ಬೌಂಡರಿ, 3 ಸಿಕ್ಸರ್) ಔಟಾದರು. ಹರ್ಮನ್ ಔಟಾದರೂ ರನ್ ಗಳಿಸುವುದರಲ್ಲಿ ಹಿಂದೆ ಬೀಳದ ನಟಾಲಿ, ಶಾಂತಚಿತ್ತದಿಂದಲೇ ಕೊನೆಯ ತನಕ ಗೋಡೆಯಂತೆ ಕ್ರೀಸ್ನಲ್ಲೇ ಉಳಿದರು. ಇವರ ಆಟ ತಂಡದ ಮೊತ್ತವನ್ನು 200 ಮುಟ್ಟಿಸುವ ಭರವಸೆ ಮೂಡಿಸಿತ್ತು. 59 ಎಸೆತಗಳಲ್ಲಿ 13 ಬೌಂಡರಿ ಸಹಿತ ಅಜೇಯ 80 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಮತ್ತೊಂದು ಎಂಡ್ನಲ್ಲಿ ಯಾರೂ ಸಾಥ್ ನೀಡದಿರುವುದು ದೊಡ್ಡ ಗುರಿ ನೀಡಲು ಸಾಧ್ಯವಾಗಲಿಲ್ಲ. ಹರ್ಮನ್ ಬಳಿಕ ಕಣಕ್ಕಿಳಿದ 7 ಬ್ಯಾಟರ್ಗಳು ಒಂದಂಕಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿ ತಂಡದ ಕುಸಿತಕ್ಕೆ ಕಾರಣರಾದರು. ಅಮೆಲಿಯಾ ಕೇರ್ (9), ಜಿಂಟಿ ಮಣಿ ಕಲಿತಾ (1), ಶಬ್ನಿಮ್ ಇಸ್ಮಾಯಿಲ್ (0), ಸಜೀವನ್ ಸಜನಾ (1), ಅಮನ್ಜೋತ್ ಕೌರ್ (7), ಸಂಸ್ಕೃತಿ ಗುಪ್ತಾ (2) ನಿರಾಸೆ ಮೂಡಿಸಿದರು. ಕೊನೆಯ 9 ಓವರ್ಗಳಲ್ಲಿ ರನ್ ಬೌಲರ್ಗಳು ಮುಂಬೈ ಮೇಲೆ ಹಿಡಿತ ಸಾಧಿಸಿದರು.