Astrology
ಕೊಯಮತ್ತೂರಿ ಈಶ ಯೋಗ ಕೇಂದ್ರದಲ್ಲಿ ನಾಳೆ ಅದ್ಧೂರಿ ಮಹಾ ಶಿವರಾತ್ರಿ; ಒಂದು ದೈವಿಕ ರಾತ್ರಿ ವಿಶೇಷ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಭಾಗಿ

ಚಿಕ್ಕಬಳ್ಳಾಪುರದ ಈಶ ಯೋಗ ಕೇಂದ್ರದಲ್ಲೂ ವಿಶೇಷ ಮಹಾ ಶಿವರಾತ್ರಿ ಆಚರಣೆ
ಚಿಕ್ಕಬಳ್ಳಾಪುರದಲ್ಲಿ ಇರುವ ಆದಿಯೋಗಿ ಸನ್ನಿಧಿಯಲ್ಲೂ ಈಶ ಫೌಂಡೇಶನ್ ಸಿದ್ಧತೆಗಳನ್ನು ನಡೆಸಿದೆ. ಇಲ್ಲೂ ಕೂಡ ನಾಳೆ (ಫೆ.26, ಬುಧವಾರ) ಸಂಜೆ 6 ರಿಂದ ಮರು ದಿನ ಬೆಳಗ್ಗೆ 6 ರವರೆಗೆ ನಾನ್ ಸ್ಟಾಪ್ ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷ ಸಂಗೀತ ಕಾರ್ಯಕ್ರಮಗಳು, ಸಾಂಪ್ರದಾಯಿಕ ನೃತ್ಯ, ಕಲೆ, ಆದಿಯೋಗಿ ದಿವ್ಯ ದರ್ಶನ ಸೇರಿದಂತೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.