Latest Kannada Nation & World
ರಸ್ತೆ ಗುಂಡಿಗಳ ನಡುವೆ ಕುಲುಕುತ್ತ ಸಾಗಿದ ಆಂಬುಲೆನ್ಸ್, ಹೃದಯಾಘಾತದಿಂದ ಸತ್ತವ ಎದ್ದು ಕುಳಿತ, ಕೊಲ್ಹಾಪುರದಲ್ಲಿ ವಿಲಕ್ಷಣ ಘಟನೆ

ಕೊಲ್ಹಾಪುರ: ರಸ್ತೆ ಗುಂಡಿಗಳು ಪ್ರಾಣ ಕಸಿಯುವುದಷ್ಟೇ ಅಲ್ಲ, ಅಪರೂಪಕ್ಕೆ ಪ್ರಾಣ ಉಳಿಸುವ ಕೆಲಸವನ್ನೂ ಮಾಡುತ್ತವೆ. ಅಂಥದ್ದೊಂದು ವಿರಳ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಿಂದ ವರದಿಯಾಗಿದೆ. ಕೊಲ್ಹಾಪುರ ಕಸಬಾ ಬಾವ್ಡಾದ ಪಾಂಡುರಂಗ್ ಉಲ್ಪೆ ಎಂಬ 65 ವರ್ಷದ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದ ಬಳಿಕ ಅವರ ಮೃತದೇಹವನ್ನು ವಾಪಸ್ ಆಂಬುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.