Latest Kannada Nation & World
ಕನ್ನಿಕಾಗೆ ಪಾಠ ಕಲಿಸಲು ಸಜ್ಜಾದ ಕುಸುಮಾ; ಮಕ್ಕಳಿಗೆ ಪ್ರೀತಿಯ ಧಾರೆಯೆರೆದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

ಕನ್ನಿಕಾಗೆ ಪಾಠ ಕಲಿಸಲು ಕುಸುಮಾ ಸಂಚು
ಭಾಗ್ಯ ಕೆಲಸ ಕಳೆದುಕೊಂಡಿರುವುದು ಕುಸುಮಾ ಮತ್ತು ಮನೆಯವರಿಗೆ ತೀವ್ರ ಸಮಸ್ಯೆಯಾಗಿದೆ. ಮನೆ ನಿರ್ವಹಿಸುವುದು ಕೂಡ ಕಷ್ಟವಾಗುತ್ತಿದೆ. ಆದರೆ ಅದಕ್ಕೆಲ್ಲಾ ನಾನು ಹೆದರುವುದಿಲ್ಲ, ಯಾರು ನನ್ನ ಸೊಸೆಯನ್ನು ಕೆಲಸದಿಂದ ತೆಗೆದು ಹಾಕಿದ್ದಾರೋ, ಅವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಕುಸುಮಾ ಹೇಳುತ್ತಾಳೆ. ಅದಕ್ಕೆ ಪೂಜಾಳ ಸಹಾಯ ಕೇಳುತ್ತಾಳೆ. ಪೂಜಾಳ ಬಳಿ ಹೇಳಿ, ಹಿತಾಗೆ ಫೋನ್ ಮಾಡಿಸುತ್ತಾಳೆ. ಹಿತಾ ಬಳಿ, ಕುಸುಮಾ ಕನ್ನಿಕಾಳ ವಿಳಾಸ ಪಡೆದುಕೊಳ್ಳುತ್ತಾಳೆ. ಹಿತಾ ಕೂಡ, ಅಡ್ರೆಸ್ ಕೊಟ್ಟಿದ್ದು ನಾನು ಎಂದು ಹೇಳಬಾರದು, ಹಾಗಾದರೆ ಮಾತ್ರ ಕೊಡುತ್ತೇನೆ, ಅಲ್ಲದೆ, ಅಡ್ರೆಸ್ ಇದ್ದರೂ, ನಿಮಗೆ ಏನೂ ಮಾಡಲಾಗದು ಎಂದು ಹೇಳುತ್ತಾಳೆ. ಅದು ಏನಾದರೂ ಸರಿಯೇ, ನಾನು ಅವರಿಗೊಂದು ಪಾಠ ಕಲಿಸದೇ ಬಿಡಲ್ಲ ಎಂದು ಕುಸುಮಾ ಹೇಳುತ್ತಾಳೆ.