Latest Kannada Nation & World
ಕೋಳಿಯ ಕತ್ತು ಹಿಸುಕಿದರೆ ಬಾಂಗ್ಲಾದೇಶಕ್ಕೆ ಕುತ್ತು, ಸಿಲಿಗುರಿ ಕಾರಿಡಾರ್ ವಿವಾದದ ಕುರಿತು ರಂಗಸ್ವಾಮಿ ಮೂಕನಹಳ್ಳಿ ವಿಶ್ಲೇಷಣೆ

ರಂಗಸ್ವಾಮಿ ಮೂಕನಹಳ್ಳಿ ಬರಹ: ಬಾಂಗ್ಲಾದೇಶದ ಮೊಹಮದ್ ಯೂನಸ್ ತಮ್ಮ ದೇಶದ ಆರ್ಥಿಕತೆಗೆ ಅಡ್ಡಗಾಲು ಹಾಕುವ ಕೆಲಸ ಮಾಡಿಕೊಂಡಿದ್ದಾರೆ. ಹೆಚ್ಚು ಮಾತಾಡುವುದರಿಂದ ಮತ್ತು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಮಾತಾಡುವುದರಿಂದ ಏನಾಗಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ನಿಮಗೆಲ್ಲಾ ಗೊತ್ತಿರುವಂತೆ ಭಾರತ ದೇಶವನ್ನು ಸೆವೆನ್ ಸಿಸ್ಟರ್ಸ್ ಎಂದು ಪ್ರಸಿದ್ದವಾಗಿರುವ ರಾಜ್ಯಗಳಾದ ಅರುಣಾಚಲ ಪ್ರದೇಶ , ಅಸ್ಸಾಂ , ಮೇಘಾಲಯ , ಮಣಿಪುರ , ಮಿಸ್ಸೋರಾಂ , ನಾಗಾಲ್ಯಾಂಡ್ ಮತ್ತು ತ್ರಿಪುರಗಳೊಂದಿಗೆ ಬೆಸೆಯಲು ಇರುವುದು ಅತಿ ಕಡಿದಾದ ದಾರಿ , 20/22 ಕಿಲೋಮೀಟರ್ ಅಗಲವಿರುವ ಇದನ್ನು ಸಿಲಿಗುರಿ ಕಾರಿಡಾರ್ ಎನ್ನಲಾಗುತ್ತದೆ. ಇದು ಕೋಳಿಯ ಕತ್ತಿನ ಆಕಾರದಲ್ಲಿರುವ ಕಾರಣ ಇದನ್ನು ಚಿಕನ್ ನೆಕ್ ಎಂದು ಕೂಡ ಕರೆಯಲಾಗುತ್ತದೆ.