Latest Kannada Nation & World

‘ಕೌರ್​​’ಗಳ ಅಬ್ಬರಕ್ಕೆ ಆರ್​ಸಿಬಿ ತತ್ತರ; ರೋಚಕ ಹಣಾಹಣಿಯಲ್ಲಿ ಸ್ಮೃತಿ ಪಡೆಗೆ ಸೋಲುಣಿಸಿದ ಮುಂಬೈ ಇಂಡಿಯನ್ಸ್

Share This Post ????

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದ ರೋಚಕ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 4 ವಿಕೆಟ್​ಗಳಿಂದ ಸೋಲಿಸುವ ಮೂಲಕ ಮುಂಬೈ ಇಂಡಿಯನ್ಸ್ ಡಬ್ಲ್ಯುಪಿಎಲ್​ನಲ್ಲಿ ಎರಡನೇ ಗೆಲುವು ಸಾಧಿಸಿತು. ಕೌರ್​​ಗಳ ಅಬ್ಬರಕ್ಕೆ ತತ್ತರಿಸಿದ ಆರ್​ಸಿಬಿ, ಟೂರ್ನಿಯಲ್ಲಿ ಮೊದಲ ಸೋಲಿಗೆ ಶರಣಾಯಿತು. ಎಲ್ಲಿಸ್ ಪೆರಿ (81) ಅವರ ಸ್ಫೋಟಕ ಆಟದ ನೆರವಿನಿಂದ ಆರ್​ಸಿಬಿ 7 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಮುಂಬೈ 19.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿ ಗೆದ್ದು ಬೀಗಿತು. ನಾಯಕಿ ಹರ್ಮನ್​ಪ್ರೀತ್ ಕೌರ್ (50) ಮತ್ತು ಅಮನ್ಜೋತ್​​ ಕೌರ್ (34*)​ ಅಬ್ಬರದ ಆಟವಾಡಿ ತವರಿನಲ್ಲಿ ಆರ್​​ಸಿಬಿ ಗೆಲುವಿನ ಕನಸನ್ನು ಭಗ್ನಗೊಳಿಸಿದರು.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!