Latest Kannada Nation & World
‘ಕ್ರಿಪ್ಟೋ ದಿ ಸೂಪರ್ ಡಾಗ್’ ಮೊದಲ ಲುಕ್ ಹೀಗಿದೆ; ಮುಂಬರುವ ಸೂಪರ್ಮ್ಯಾನ್ ಸಿನಿಮಾ ಟ್ರೇಲರ್ ಸದ್ಯದಲ್ಲೇ ಬಿಡುಗಡೆ

ಬರಹಗಾರ/ಚಲನಚಿತ್ರ ನಿರ್ಮಾಪಕ ಡಾನ್ ಮಾರ್ಕಸ್ ಪ್ರಕಾರ, ಸಾಕಷ್ಟು ಅಂತಿಮಗೊಳಿಸಿದ ಟ್ರೈಲರ್ ಅನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ, ಆದರೆ ಅವರು ಅದನ್ನು ಒಪ್ಪುತ್ತಿಲ್ಲ. ಯಾಕೆಂದರೆ ಇನ್ನಷ್ಟು ಕ್ಯಾಲಿಟಿ ಬೇಕು ಎಂಬ ಬೇಡಿಕೆ ಇದೆ. ಡಿಸೆಂಬರ್ ತಿಂಗಳಿನಲ್ಲಿ ಸಾಕಷ್ಟು ಹಾಲಿವುಡ್ ಸಿನಿಮಾಗಳು ತೆರೆಗೆ ಬರಲಿರುವ ಕಾರಣ ಎಷ್ಟು ಪ್ರಯತ್ನಪಟ್ಟರೂ ಕಡಿಮೆಯೇ ಎಂದು ಚಿತ್ರತಂಡ ಹೇಳಿದೆ. ಆದರೆ ಜನರಿಗೆ ಅದ್ಭುತವಾದ ಹೊಸ ಲೋಕವನ್ನು ತೋರಿಸಲು ಸೂಪರ್ ಮ್ಯಾನ್ ರೆಡಿಯಾಗುತ್ತಿದೆ.