Astrology
ಕ್ರೈಸ್ತ ಬಾಂಧವರ ಪ್ರಮುಖ ಹಬ್ಬ ಕ್ರಿಸ್‌ಮಸ್ ಇತಿಹಾಸ ತಿಳಿಯಿರಿ, ಯೇಸುಕ್ರಿಸ್ತನ ತಂದೆ ತಾಯಿ ಹೆಸರೇನು?

ಯೇಸುಕ್ರಿಸ್ತನ ಜನ್ಮದಿನದಂದು ಕ್ರಿಸ್‌ಮಸ್ ಆಚರಣೆ
ಆ ರಾತ್ರಿ ಗ್ರಾಮದ ಪಕ್ಕದ ಹೊಲಗಳಲ್ಲಿ ಕೆಲವರು ಕುರಿಗಳ ಹಿಂಡುಗಳನ್ನು ಕಾಯುತ್ತಿದ್ದರು. ಆ ಸಮಯದಲ್ಲಿ ಒಬ್ಬ ದೇವದೂತನು ಅವರ ಮುಂದೆ ಆಕಾಶದಿಂದ ಇಳಿಯುತ್ತಾನೆ. ಸುತ್ತಲೂ ಬೆಳಕು ಹರಡಿದ್ದರಿಂದ ಕುರಿ ಕಾಯುವವರು ಭಯಪಡುತ್ತಾರೆ. ‘ಹೆದರಬೇಡಿ, ನಾನು ಇಲ್ಲಿಗೆ ಬಂದಿರುವುದು ನಿಮಗೆ ಒಳ್ಳೆಯ ಸುದ್ದಿಯನ್ನು ಹೇಳಲು. ಇಂದು ಬೆತ್ಲೆಹೆಮ್‌ನ ಮ್ಯಾಂಗರ್‌ನಲ್ಲಿ, ಜಗದ ರಕ್ಷಕನು ಜನಿಸಿದ್ದಾನೆ, ಅವನು ನಿಮ್ಮೆಲ್ಲರ ಪ್ರಭುವಾಗಿದ್ದಾನೆ ಎಂದು ಹೇಳಿ ಅದೃಶ್ಯನಾಗುತ್ತಾನೆ. ಕುರಿ ಕಾಯುವವರು ದೇವದೂತ ಹೇಳಿದ ಗೋಶಾಲೆಗೆ ಹೋಗುತ್ತಾರೆ. ಅಲ್ಲಿ ಅವರು ಮೇರಿ ಮತ್ತು ಜೋಸೆಫ್ ಮಗುವಿನೊಂದಿಗೆ ಕೊಟ್ಟಿಗೆಯಲ್ಲಿ ಮಲಗಿರುವುದನ್ನು ನೋಡುತ್ತಾರೆ. ಡಿಸೆಂಬರ್ 24 ಮಧ್ಯರಾತ್ರಿ 12 ಗಂಟೆ ನಂತರ ಯೇಸು ಜನಿಸುತ್ತಾನೆ. ಅಂದಿನಿಂದ ಪ್ರತಿ ವರ್ಷ ಡಿಸೆಂಬರ್ 25 ರಂದು ಕ್ರಿಸ್‌ಮಸ್ ಆಚರಿಸಲಾಗುತ್ತದೆ.