Latest Kannada Nation & World
ಕ್ವಿಂಟನ್ ಡಿ ಕಾಕ್ 97, ಗೆಲುವಿನ ಖಾತೆ ತೆರೆದ ಕೆಕೆಆರ್; ರಾಜಸ್ಥಾನ್ ರಾಯಲ್ಸ್ ಸತತ ಎರಡನೇ ಸೋಲು

ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸಂಘಟಿತ ಹೋರಾಟ ನಡೆಸುವ ಮೂಲಕ ಇದೀಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸುವುದರೊಂದಿಗೆ ಐಪಿಎಲ್ನಲ್ಲಿ ಗೆಲುವಿನ ಖಾತೆ ತೆರೆದಿದೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತ ಬಿಟ್ಟುಕೊಟ್ಟು ಎಸ್ಆರ್ಹೆಚ್ಗೆ ಶರಣಾಗಿದ್ದ ರಾಯಲ್ಸ್, ಸತತ ಎರಡನೇ ಸೋಲಿನ ಕಹಿ ಅನುಭವಿಸಿದೆ. ನಾಲ್ವರು ಬೌಲರ್ಗಳು ತಲಾ 2 ವಿಕೆಟ್ ಪಡೆಯುವುದರ ಜೊತೆಗೆ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಆಕರ್ಷಕ 97 ರನ್ ಬಲದಿಂದ ರಿಯಾನ್ ಪರಾಗ್ ಪಡೆಯನ್ನು 8 ವಿಕೆಟ್ಗಳಿಂದ ಮಣಿಸಿದ ರಹಾನೆ ಪಡೆ 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 6 ಸ್ಥಾನ ಪಡೆದಿದೆ. 153 ರನ್ ಗುರಿ ಬೆನ್ನಟ್ಟಿದ ಕೆಕೆಆರ್, 17.3 ಓವರ್ಗಳಲ್ಲೇ ಗೆಲುವಿನ ಗೆರೆ ದಾಟಿದೆ.