Latest Kannada Nation & World
ಗಂಡನ ಮೇಲೆ ಅಪಾರ ಪ್ರೀತಿ ಹೊತ್ತ ಪಾರು; ಶಿವು ಬಾಯಲ್ಲಿ ಹುಡುಗಿಯರ ಹೆಸರು ಹೇಳಿ ಹುಸಿಮುನಿಸು

ಶಿವು ಮೇಲೆ ಪಾರುಗೆ ಹುಸಿಮುನಿಸು
ಹಿಂದಿನಿಂದ ಬಂದು ಶಿವು ಕಣ್ಣು ಮುಚ್ಚಿ, ನಾನು ನಿನಗೆ ಏನೋ ಕೊಡ್ತೀನಿ ಎಂದು ಹೇಳಿದ್ದಾಳೆ. ಆದರೆ ಅದಕ್ಕೂ ಮುನ್ನ ಅವಳು ಶಿವು ಕಣ್ಣು ಮುಚ್ಚಿದಾಗ “ನಾನು ಯಾರೆಂದು ಹೇಳಬೇಕು” ಎಂದು ಶಿವು ಹತ್ತಿರ ಹೇಳಿರುತ್ತಾಳೆ. ಶಿವು ಕೂಡ ಬೇಕು ಎಂದೇ ಸಾಕಷ್ಟು ಹುಡುಗಿಯರ ಹೆಸರು ಹೇಳುತ್ತಾನೆ. ಪಾರುಗೆ ಇದರಿಂದ ಕೋಪ ಬರಲಿ ಎಂಬುದೇ ಅವನ ಉದ್ದೇಶ ಆಗಿರುತ್ತದೆ. ಸುಮ್ಮನೇ ಅವಳನ್ನು ಕೆಣಕುತ್ತಾನೆ. ಆಗ ಪಾರು ಅಷ್ಟೊಂದು ಹುಡುಗಿಯರ ಹೆಸರು ಕೇಳಿ ಮುನಿಸಿಕೊಳ್ಳುತ್ತಾಳೆ. ತನುಜಾ, ಕೆಂಪಿ, ಮಾಲಕ್ಷ್ಮಿ, ಅಂತೆಲ್ಲ ಏನೇನೋ ಒಂದಷ್ಟು ಹೆಸರು ಹೇಳುತ್ತಾನೆ. ಆಗ ಪಾರು ಕೋಪದಿಂದ ಕೈ ಬಿಟ್ಟು “ನಾನು ಪಾರು, ಇವರೆಲ್ಲ ನಿನ್ನ ಹುಡುಗೀರಾ? ” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಶಿವು ಕೂಡ ಹೌದು ಎಂದು ಉತ್ತರಿಸಿ ನಗುತ್ತಾನೆ.