Astrology
ತಾಟಕಿ ಮತ್ತು ಮಾರೀಚನ ಹಿನ್ನೆಲೆ ವಿವರಿಸಿದ ವಿಶ್ವಾಮಿತ್ರರು, ತಾಟಕವನ ದಾಟಿ ಹೋಗಲು ಸಂಹಾರವೇ ಆಗಬೇಕು-vishwamitra explained the background of tataki and maricha to rama and lakshmana ramayana smk ,ರಾಶಿ ಭವಿಷ್ಯ ಸುದ್ದಿ

ವಿಶ್ವಾಮಿತ್ರರ ಮಾತನ್ನು ಕೇಳಿದ ಶ್ರೀರಾಮನು ಸಾಮಾನ್ಯವಾಗಿ ಯಕ್ಷರು ದುರ್ಬಲರಾಗಿರುತ್ತಾರೆ. ಇದರ ಬಗ್ಗೆ ನಾನು ಪುರಾಣ ಪುಣ್ಯ ಕಥೆಗಳಿಂದ ತಿಳಿದ್ದೇನೆ. ಆದರೆ ತಾಟಕಿಗೆ ಸಾವಿರ ಆನೆಗಳ ಬಲವಿದೆ ಎಂದು ತಿಳಿಸಿದ್ದೀರಿ.ಇದು ಹೇಗೆ? ಎಂದು ಪ್ರಶ್ನಿಸುತ್ತಾನೆ. ಆಗ ವಿಶ್ವಾಮಿತ್ರರು ತಾಟಕಿಯ ಹಿಂದಿನ ಕಥೆಯನ್ನು ಹೇಳಲು ಆರಂಭಿಸುತ್ತಾರೆ. ಹಿಂದೆ ಸುಕೇತು ಎಂಬ ಹೆಸರಿನ ಒಳ್ಳೆಯ ನಡತೆಯುಳ್ಳ, ಒಳ್ಳೆಯ ಚರಿತ್ರೆಯುಳ್ಳ ಯಕ್ಷನೊಬ್ಬನು ಇದ್ದನು. ಇವನಿಗೆ ಸಂತಾನವಿರಲಿಲ್ಲ. ಆಗ ಸುಕೇತು ಸಾಕ್ಷಾತ್ ಬ್ರಹ್ಮದೇವನನ್ನು ಕುರಿತು ಘೋರ ತಪಸ್ಸನ್ನು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವನು ಪ್ರತ್ಯಕ್ಷನಾಗಿ ತಾಟಕ ಎಂಬ ಹೆಣ್ಣು ಮಗುವನ್ನು ದಯಪಾಲಿಸುತ್ತಾನೆ. ಅಲ್ಲದೆ ಅವಳಿಗೆ ಸಾವಿರ ಆನೆಗಳ ಬಲವನ್ನು ನೀಡುತ್ತಾನೆ.