Latest Kannada Nation & World
ಅಧಿಕಾರಕ್ಕೆ ಬರಲು ಬೇಕಾಗುತ್ತೆ ಅಂತ 160ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಬೆಂಬಲ ಪತ್ರ ಸಂಗ್ರಹಿಸಿದ ಮಹಾ ವಿಕಾಸ್ ಅಘಾಡಿ

ಈ ರೀತಿ ಬೆಂಬಲ ಸಂಗ್ರಹಿಸುವುದು ಹೊಸ ವಿಚಾರವಲ್ಲ. ಮಹಾ ವಿಕಾಸ್ ಅಘಾಡಿಯ ಅಭ್ಯರ್ಥಿಗಳ ಹೊರತಾಗಿ ಗೆಲ್ಲಬಹುದಾದ ಕೆಲವು ಸ್ವತಂತ್ರ ಅಭ್ಯರ್ಥಿಗಳನ್ನು, ಬಂಡಾಯ ಅಭ್ಯರ್ಥಿಗಳನ್ನೂ ಸಂಪರ್ಕಿಸಿ ಅವರಿಂದ ಬೆಂಬಲ ಪತ್ರ ಪಡೆಯಲಾಗಿದೆ ಎಂದು ಮೂಲಗಳು ಹೇಳಿದ್ದಾಗಿ ವರದಿ ವಿವರಿಸಿದೆ. ಮಹಾ ವಿಕಾಸ್ ಅಘಾಡಿಯಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನಾ (ಯುಬಿಟಿ), ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ (ಎಸ್‌ಪಿ)) ಮತ್ತು ಕಾಂಗ್ರೆಸ್ ಪಕ್ಷಗಳಿವೆ. ಈ ಪೈಕಿ ಕಾಂಗ್ರೆಸ್ 101, ಶಿವ ಸೇನಾ ಯುಬಿಟಿ 95, ಎನ್‌ಸಿಪಿ ಎಸ್‌ಪಿ 86 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಇದೇ ವೇಳೆ, ಆಡಳಿತಾರೂಢ ಮಹಾಯುತಿ ಮೈತ್ರಿಯಲ್ಲಿ ಬಿಜೆಪಿ 149, ಶಿವ ಸೇನಾ 81, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 59 ಸ್ಥಾನಗಳಲ್ಲಿ ಸ್ಪರ್ಧಿಸಿದೆ.