Latest Kannada Nation & World
ಅಭಿಷೇಕ್ ಆಟಕ್ಕೆ ಬೆದರಿದ ಆಂಗ್ಲರು, 5ನೇ ಟಿ20ಯಲ್ಲೂ 150 ರನ್‌ಗಳಿಂದ ಸೋತ ಇಂಗ್ಲೆಂಡ್; 4-1 ಅಂತರದಿಂದ ಸರಣಿ ಗೆದ್ದ ಭಾರತ

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಅಬ್ಬರದ ಆರಂಭ ಪಡೆದ ಸಂಜು ಸ್ಯಾಮ್ಸನ್ ಮತ್ತೆ ಅಲ್ಪ ಮೊತ್ತಕ್ಕೆ ಔಟಾದರು. ಆದರೂ ನಿರ್ಭೀತ ಆಟ ಮುಂದುವರೆಸಿದ ಅಭಿಷೇಕ್ ಶರ್ಮಾ, ಪವರ್‌ಪ್ಲೇ ಲಾಭ ಪಡೆದು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ ದಾಖಲಿಸಿರು, 37 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಅವರು, ಅಂತಿಮವಾಗಿ 54 ಎಸೆತಗಳಲ್ಲಿ 135 ರನ್ ಸಿಡಿಸಿ ಔಟಾದರು.