Latest Kannada Nation & World
ಗೆಲುವಿನ ಹಳಿಗೆ ಮರಳಲು ಮುಂಬೈ ಇಂಡಿಯನ್ಸ್ vs ಆರ್‌ಸಿಬಿ ಮುಖಾಮುಖಿ; ನಾಳಿನ ಐಪಿಎಲ್ ಪಂದ್ಯದ 10 ಅಪ್ಡೇಟ್ಸ್

ಐಪಿಎಲ್ 18ನೇ ಆವೃತ್ತಿಯು ಆಸಕ್ತಿಯ ಘಟ್ಟ ತಲುಪುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯ ನಾಲ್ಕನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಅತ್ತ ಮುಂಬೈ ಇಂಡಿಯನ್ಸ್ ತಂಡವು ತನ್ನ ಐದನೇ ಪಂದ್ಯದಲ್ಲಿ ಬಲಿಷ್ಠ ಆರ್‌ಸಿಬಿಯನ್ನು ತನ್ನದೇ ತವರಿನಲ್ಲಿ ಎದುರಿಸಲು ಎದುರು ನೋಡುತ್ತಿದೆ. ಏಪ್ರಿಲ್ 7ರ ಸೋಮವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಎಂಐ ತಂಡಗಳು ಮುಖಾಮುಖಿಯಾಗುತ್ತಿದೆ. ಸತತ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ಆರ್‌ಸಿಬಿ, ಕೊನೆಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಮುಗ್ಗರಿಸಿದೆ. ಈಗ ಹೆಣಗಾಡುತ್ತಿರುವ ಎಂಐ ವಿರುದ್ಧ ಗೆಲುವಿನ ಲಯಕ್ಕೆ ಮರಳಲು ಹವಣಿಸುತ್ತಿದೆ. ಅತ್ತ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಕಳೆದುಕೊಂಡಿರುವ ಮುಂಬೈ, ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.