Latest Kannada Nation & World
ಗ್ಲೆನ್ ಫಿಲಿಪ್ಸ್ ನೆನಪಿಸಿದ ಹ್ಯಾರಿಸ್ ರೌಫ್ ಕ್ಯಾಚ್; ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಚೆಂಡು ಪಡೆದ ವಿಡಿಯೋ ವೈರಲ್

ಹ್ಯಾರಿಸ್ ರೌಫ್ ಅವರ ಕ್ಯಾಚ್ ನೋಡಿದ ನೆಟ್ಟಿಗರು ನ್ಯೂಜಿಲೆಂಡ್ ಫೀಲ್ಡರ್ ಗ್ಲೆನ್ ಫಿಲಿಪ್ಸ್ ಅವರನ್ನು ನೆನಪಿಸಿಕೊಂಡಿದ್ದಾರೆ. ಗಮನಾರ್ಹವಾಗಿ, ಗ್ಲೆನ್ ಫಿಲಿಪ್ಸ್ ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂತಹದ್ದೇ ಮೂರು ಕ್ಯಾಚ್ಗಳನ್ನು ಪಡೆದಿದ್ದರು. ಮೊಹಮ್ಮದ್ ರಿಜ್ವಾನ್, ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಅವರ ಅದ್ಭುತ ಕ್ಯಾಚ್ಗಳನ್ನು ಪಡೆದಿದ್ದರು. ಫಿಲಿಪ್ಸ್ ಅವರನ್ನು ಹಾರು ಪಕ್ಷಿ ಎಂದೇ ಕರೆಯುತ್ತಾರೆ. ಆದರೆ ಫಿಲಿಪ್ಸ್ ಅವರಂತೆಯೇ ಹ್ಯಾರಿಸ್ ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಕ್ಯಾಚ್ ಎಂದರೂ ತಪ್ಪಿಲ್ಲ.