Latest Kannada Nation & World
ಚಿತ್ರಮಂದಿರ, ಒಟಿಟಿ ಬಳಿಕ ಟಿವಿಯಲ್ಲೂ ಕೃಷ್ಣಂ ಪ್ರಣಯ ಸಖಿ ಕಮಾಲ್; ಟಿಆರ್‌ಪಿಯಲ್ಲಿ ಗಣೇಶ್ ಸಿನಿಮಾ ಮುಂದಡಿ

ಬಹುತಾರಾಗಣದ ಸಿನಿಮಾ
ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದ ಹಾಡಿನ ಮೂಲಕವೇ ಈ ಸಿನಿಮಾ ಹಿಟ್ ಪಟ್ಟ ಪಡೆದುಕೊಂಡಿದೆ. ವೆಂಕಟ್ ರಾಮ್ ಪ್ರಸಾದ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿಜ್ ಈಶ್ವರ್ ಸಂಭಾಷಣೆ, ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಶಶಿಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ಶ್ರುತಿ ಸೇರಿ ಹಲವರು ನಟಿಸಿದ್ದಾರೆ.