Latest Kannada Nation & World
ಬಿಗ್ ಬಾಸ್ ಮನೆಯಲ್ಲಿ ಹನುಮಂತ ಸಖತ್ ಕ್ರಿಮಿನಲ್ ಎನ್ನುತ್ತಲೇ ಮೀಸಲಾತಿ ವಿಚಾರವನ್ನು ಬಿಚ್ಚಿಟ್ಟ ಮಾಜಿ ಸ್ಪರ್ಧಿ

Bigg Boss Kannada 11: ಬಿಗ್ ಬಾಸ್ ಕನ್ನಡ 11ರ ವಿನ್ನರ್ ಯಾರು ಎಂಬ ಕೌತುಕಕ್ಕೆ ಇಡೀ ಕರುನಾಡು ಕಾಯುತ್ತಿದೆ. ಸದ್ಯ ಟಾಪ್ ಆರರಲ್ಲಿ ಘಟಾನುಘಟಿ ಸ್ಪರ್ಧಿಗಳೇ ನಿಂತಿದ್ದಾರೆ. ಉಗ್ರಂ ಮಂಜು, ತ್ರಿವಿಕ್ರಮ್, ಹನುಮಂತ, ಭವ್ಯಾ ಗೌಡ, ಮೋಕ್ಷಿತಾ ಪೈ, ರಜತ್ ಪೈಕಿ ಯಾರು ಕಪ್ ಎತ್ತಿ ಹಿಡಿಯುವವರು ಎಂಬ ಚರ್ಚೆಗಳೂ ನಡೆಯುತ್ತಿವೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳ ಫ್ಯಾನ್ಸ್, ವೋಟ್‌ಗಾಗಿ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ. ಇನ್ನು ಕೆಲವರು ಇವರೇ ಗೆಲ್ತಾರೆ ಎಂದೂ ಭವಿಷ್ಯ ನುಡಿಯುತ್ತಿದ್ದಾರೆ. ಆ ಪೈಕಿ ಮಾಜಿ ಸ್ಪರ್ಧಿ ಹಂಸ ನಾರಾಯಣಸ್ವಾಮಿ ಸಹ ಇಬ್ಬರ ಹೆಸರನ್ನು ಸೂಚಿಸಿದ್ದಾರೆ.