Astrology
ಜನವರಿ 15ಕ್ಕೆ ಗವಿಸಿದ್ದೇಶ್ವರ ಜಾತ್ರಾ ಮಹಾರಥೋತ್ಸವ; ಗವಿಮಠದಲ್ಲಿ ನಡೆಯುವ 7 ದಿನಗಳ ಅದ್ಧೂರಿ ಸಂಭ್ರಮದ ಮಾಹಿತಿ ಇಲ್ಲಿದೆ
ಬೆಂಗಳೂರಿನಿಂದ ಕೊಪ್ಪಳಕ್ಕೆ ಹೋಗುವುದು ಹೇಗೆ
ಬೆಂಗಳೂರಿನಿಂದ ಕೊಪ್ಪಳಕ್ಕೆ 351 ಕಿಲೋ ಮೀಟರ್ ಇದ್ದು, ಕಾರು, ಬಸ್, ರೈಲು ಹಾಗೂ ವಿಮಾನ ಮೂಲಕ ತಲುಪಬಹುದು. ಕೊಪ್ಪಳದ ಬಸ್ ನಿಲ್ದಾಣದಿಂದ ಗವಿಸಿದ್ದೇಶ್ವರ ಮಠಕ್ಕೆ 3 ಕಿಲೋ ಮೀಟರ್ ಅಂತರವಿದ್ದು, 9 ನಿಮಿಷಗಳಲ್ಲಿ ಮಠಕ್ಕೆ ತಲುಪಬಹುದು. ಇನ್ನು ಬೆಂಗಳೂರುನಿಂದ ಕೊಪ್ಪಳಗೆ ಸಾಕಷ್ಟು ಕೆಎಸ್ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳು ಸಂಚರಿಸುತ್ತವೆ. ಕೆಎಸ್ಆರ್ ಟಿಸಿ ಬಸ್ ಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಹೊರಟರೆ, ಖಾಸಗಿ ಬಸ್ ಗಳು ಆನಂದ್ ರಾವ್ ಸರ್ಕಲ್ ನಿಂದ ಹೊರಡುತ್ತವೆ. ಸ್ಲೀಪರ್, ಸೆಮಿ ಸ್ಲೀಪರ್ ಹಾಗೂ ಸಾಮಾನ್ಯ ಸೀಟಿನ ಬಸ್ ಗಳು ಸಂಚರಿಸುತ್ತವೆ. 5 ರಿಂದ 6 ಗಂಟೆಗಳ ಪ್ರಯಾಣ ಮಾಡಿದರೆ ಕೊಪ್ಪಳ ತಲುಪಬಹುದು.