Latest Kannada Nation & World
ಟಾಲಿವುಡ್ ನ್ಯೂಸ್: ಪತಿಯೊಂದಿಗೆ ಸೇರಿ ಯುವತಿ ಮೇಲೆ ಹಲ್ಲೆ ಆರೋಪ; ಜಾನಿ ಮಾಸ್ಟರ್ ಪತ್ನಿ ಆಯೇಷಾ ಬಂಧನ ಸಾಧ್ಯತೆ

ಸಂತ್ರಸ್ತೆ ಮೇಲೆ ಜಾನಿ ಮಾಸ್ಟರ್ ಪತ್ನಿ ದೂರು
ಪತಿ ಅರೆಸ್ಟ್ ಆಗುತ್ತಿದ್ದಂತೆ ಜಾನಿ ಮಾಸ್ಟರ್ ಪತ್ನಿ ಆಯೆಷಾ, ಆಕ್ರೋಶ ವ್ಯಕ್ತಪಡಿಸಿದ್ದರು. ಪತಿಯನ್ನು ಅರೆಸ್ಟ್ ಮಾಡಿದ್ದಕ್ಕೆ ಕಾರಣವೇನು? ಅವರು ಅತ್ಯಾಚಾರ ಮಾಡಿರುವುದಕ್ಕೆ ಸಾಕ್ಷಿ ಏನಿದೆ ಎಂದು ಪ್ರಶ್ನಿಸಿದ್ದರು. ಜೊತೆಗೆ ತೆಲುಗು ಫಿಲ್ಮ್ ಚೇಂಬರ್‌ಗೆ ಪತ್ರ ಬರೆದು ನಮಗೆ ನ್ಯಾಯ ಒದಗಿಸಿಕೊಂಡುವಂತೆ ಮನವಿ ಮಾಡಿದ್ದರು. ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆ ಹುಡುಗಿ ಚಿತ್ರರಂಗದಲ್ಲಿ ಬೆಳೆಯಲು ನನ್ನ ಪತಿಯನ್ನು ಬಳಸಿಕೊಂಡಳು, ಆಕೆಗೆ ಇದೇ ಕೆಲಸ, ಹಣ ಇರುವವರನ್ನು ಬಲೆಗೆ ಬೀಳಿಸಿಕೊಳ್ಳುತ್ತಾಳೆ ಎಂದು ಆರೋಪಿಸಿದ್ದರು. ಆದರೆ ಪ್ರಕರಣದಲ್ಲಿ ಆಯೆಷಾ ಪಾತ್ರ ಕೂಡಾ ಇದೆ ಎನ್ನಲಾಗುತ್ತಿದೆ. ಜಾನಿ ಮಾಸ್ಟರ್, ಆ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಾಗ ವಿಚಾರವನ್ನು ಎಲ್ಲೂ ತಿಳಿಸದಂತೆ ಬೆದರಿಕೆ ಒಡ್ಡಿದ್ದರು.