Latest Kannada Nation & World
India vs New Zealand: ಸತತ 12 ಪಂದ್ಯಗಳಲ್ಲಿ ಟಾಸ್ ಸೋತ ರೋಹಿತ್ ಶರ್ಮಾ; ಬ್ರಿಯಾನ್ ಲಾರಾ ದಾಖಲೆ ಸಮ

ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ದಾಖಲೆಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಇದೀಗ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಆರಂಭವಾಗುವ ಮುನ್ನವೇ ಮತ್ತೊಂದು ಅನಗತ್ಯ ದಾಖಲೆಯನ್ನು ಮಾಡಿದ್ದಾರೆ. ಏಕದಿನ ಸ್ವರೂಪದಲ್ಲಿ ಟಾಸ್ ಸೋಲುವ ಅಭ್ಯಾಸ ಮುಂದುವರೆಸಿದ ಅವರು, ಫೈನಲ್ ಪಂದ್ಯದಲ್ಲೂ ಟಾಸ್ ಸೋತಿದ್ದಾರೆ.