Latest Kannada Nation & World
ಡೆಲ್ಲಿ ಮಣಿಸಿದ ಮುಂಬೈ ಇಂಡಿಯನ್ಸ್ ಮುಡಿಗೆ 2ನೇ ಡಬ್ಲ್ಯುಪಿಎಲ್ ಕಿರೀಟ; ಸತತ 3ನೇ ಬಾರಿಗೆ ಕ್ಯಾಪಿಟಲ್ಸ್ ಕನಸು ಭಗ್ನ

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ರನ್ಗಳಿಂದ ಮಣಿಸಿದ ಮುಂಬೈ ಇಂಡಿಯನ್ಸ್ 2ನೇ ಟ್ರೋಫಿಗೆ ಮುತ್ತಿಕ್ಕಿದೆ. ಆದರೆ ಸತತ 3ನೇ ಬಾರಿಯೂ ಫೈನಲ್ನಲ್ಲಿ ಮುಗ್ಗರಿಸಿದ ಡೆಲ್ಲಿಗೆ ಚೊಚ್ಚಲ ಪ್ರಶಸ್ತಿಯ ಕನಸು ಮತ್ತೆ ನಿರಾಸೆಯಾಗಿದೆ. ಮುಂಬೈ ನೀಡಿದ್ದ 150 ರನ್ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾದ ಲ್ಯಾನಿಂಗ್ ಪಡೆ, 141 ರನ್ ಗಳಿಸಿತು.