Latest Kannada Nation & World
ಡೊನಾಲ್ಡ್ ಟ್ರಂಪ್ ಗೆಲುವಿನಿಂದ ಪ್ರಚೋದನೆ, ತಂದೆಯನ್ನೇ ಕೊಡಲಿಯಿಂದ ಕ್ರೂರವಾಗಿ ಕೊಂದ ಮಗಳು

“ತಂದೆಯೊಂದಿಗಿನ ತನ್ನ ಸಂಬಂಧವು ಹದಗೆಟ್ಟಿದೆ. ನನಗೆ ಆತನ ಬಗ್ಗೆ ಯಾವುದೇ ಒಳ್ಳೆಯ ಭಾವನೆ ಉಳಿದಿಲ್ಲ” ಎಂದು ಬರ್ಕ್ ಪೊಲೀಸರಿಗೆ ತಿಳಿಸಿದ್ದಾರೆ. “ಟ್ರಂಪ್‌ನ ವಿಜಯವೇ ಆಕೆಯನ್ನು ಉದ್ರೇಕಗೊಳಿಸಿ, ಇಂತಹ ಕೃತ್ಯಕ್ಕೆ ಪ್ರೇರೇಪಿಸಿದೆ” ಎಂದು ಪೊಲೀಸರು ಹೇಳಿದ್ದರೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಆಕೆ ಕೈಗಳನ್ನು ಮೇಲಕ್ಕೆತ್ತಿ ಹೊರಬಂದಿದ್ದಾಳೆ. ರಕ್ತ ಎಲ್ಲಿಂದ ಬಂತು, ಕಿಟಕಿಗಳನ್ನು ಹೊಡೆದವರು ಯಾರು ಎಂದು ಆಕೆ ಹೇಳಲಿಲ್ಲ. ಬಳಿಕ ಆಕೆಯೇ “ನಾನೇ ಈ ಕೃತ್ಯ ಮಾಡಿದೆ” ಎಂದು ತಿಳಿಸಿದಳು ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಇವಳನ್ನು ಕೊಲೆ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ.