Latest Kannada Nation & World
ತಂಗಿ ಸುಧಾಳಿಗೆ ಗೌತಮ್ ನೀಡಿದ್ರು ಅಕ್ಕರೆಯ ಕೈತುತ್ತು, ಅಣ್ಣ ತಂಗಿ ಬಂಧ ಬಹಿರಂಗ ಯಾವಾಗ? ಅಮೃತಧಾರೆ ಧಾರಾವಾಹಿ ಸೋಮವಾರದ ಸಂಚಿಕೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಸೀರೆಗೆ ಬೆಂಕಿ ತಾಗಿದಾಗ ಸುಧಾ ಅದನ್ನು ಗಮನಿಸಿ, ಅದನ್ನು ನಂದಿಸಲು ಯತ್ನಿಸುತ್ತಾರೆ. ಇದರಿಂದ ಆಕೆಯ ಕೈಗೆ ಸ್ವಲ್ಪ ಗಾಯವಾಗಿದೆ. ಈಕೆಗೆ ಗಾಯವಾಗಿರುವ ಕುರಿತು ಭೂಮಿಕಾ ಬೇಸರ ವ್ಯಕ್ತಪಡಿಸುತ್ತಾರೆ. “ನನ್ನ ಜೀವನದಲ್ಲಿ ಆಗಿರುವ ಗಾಯಗಳ ಮುಂದೆ ಇದು ತುಂಬಾ ಚಿಕ್ಕದು” ಎಂದು ತನ್ನ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾರೆ ಸುಧಾ. ಈ ಸಮಯದಲ್ಲಿ ಗೌತಮ್ ಬರುತ್ತಾರೆ. ಅವರು ಗಾಬರಿಯಿಂದ ಆಗಮಿಸಿದ್ದಾರೆ. “ನೀವು ರೆಸ್ಟ್ ಮಾಡೋದು ಬಿಟ್ಟು ಕೆಳಗೆ ಯಾಕೆ ಹೋದ್ರಿ” ಎಂದು ಗೌತಮ್ ಬಯ್ಯುತ್ತಾರೆ. ಇದಾದ ಬಳಿಕ ಒಂದಿಷ್ಟು ಮಾತುಗಳಾಗುತ್ತವೆ. “ಈ ಘಟನೆಯ ಹಿಂದೆ ಯಾರಾದರೂ ಇದ್ದಾರ” ಎಂದು ಗೌತಮ್ ಯೋಚಿಸುತ್ತಾರೆ.