Latest Kannada Nation & World
ತನಗೆ ತಾನೇ ಪೂಜೆ ಮಾಡಿಕೊಂಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ ಚೈತ್ರಾ ಕುಂದಾಪುರ; ಇಲ್ಲಿದೆ ನಿಜವಾದ ಉತ್ತರ

ದೃಷ್ಟಿ ತೆಗೆಯುವ ರೀತಿಯಂತೆ
ಚೈತ್ರಾ ಅವರು ಹಿಂದೊಮ್ಮೆ ಭವ್ಯಾ ಗೌಡ ಅವರಿಗೆ ಇದೇ ರೀತಿ ಮಾಡಿದ್ದರಂತೆ. ಅದನ್ನು ಐಶ್ವರ್ಯ ನೋಡಿದ್ದರಂತೆ. ಈ ಎಲ್ಲ ವಿಚಾರಗಳೂ ಸಹ ಚರ್ಚೆಗೆ ಬಂದವು. ಚೈತ್ರಾ ಕುಂದಾಪುರ ಅವರು ಊದುಕಡ್ಡಿ ತೆಗೆದುಕೊಂಡು ಇನ್ನೊಂದು ಕೈಯ್ಯಲ್ಲಿ ಗಂಟೆ ಹಿಡಿದುಕುಂಡು ಪೂಜೆ ಮಾಡಿಕೊಂಡಿರುವುದನ್ನು ಜನರು ಬೇರೆ ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದರು. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂಬಂತೆ ಇವರು ತಮ್ಮಲ್ಲೇ ತಾವು ದೇವರನ್ನು ಕಂಡಿದ್ದಾರೆ ಎಂದು ಜನರು ಕಾಮೆಂಟ್ ಮಾಡುತ್ತಿದ್ದರು.