ತನ್ವಿ ಬರ್ತ್ಡೇ ಪಾರ್ಟಿಗೆ ಹಣ ಹೊಂದಿಸಲು ಪರದಾಡುತ್ತಿರುವ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

ಹಣ ಹೊಂದಿಸಲು ಪರದಾಡಿದ ಭಾಗ್ಯ
ತನ್ವಿ ಬರ್ತ್ಡೇ ಪಾರ್ಟಿ ಮಾಡಲು ಭಾಗ್ಯ ಒಪ್ಪಿಕೊಂಡಿದ್ದಾಳೆ. ಆದರೆ ಅವಳಲ್ಲಿ ಅದಕ್ಕೆ ಸಾಕಷ್ಟು ಹಣ ಇರುವುದಿಲ್ಲ, ಅದಕ್ಕಾಗಿ ಅವಳು, ಮನೆಯಲ್ಲಿದ್ದ ಎಲ್ಲ ಹಣ, ಚಿಲ್ಲರೆಯನ್ನು ಒಟ್ಟುಗೂಡಿಸಿ, ಲೆಕ್ಕ ಹಾಕುತ್ತಿದ್ದಾಳೆ. ತನ್ವಿಗೆ ಉಡುಗೊರೆ ಕೊಡುವುದಾಗಿಯೂ, ಬರ್ತ್ಡೇ ಪಾರ್ಟಿಯನ್ನು ಗೆಳೆಯರ ಜತೆ ಆಚರಿಸಲು ವ್ಯವಸ್ಥೆ ಮಾಡುವುದಾಗಿಯೂ ಹೇಳಿದ್ದಾಳೆ. ಆದರೆ ಈಗ ನೋಡಿದರೆ ಅದಕ್ಕೆ ಬೇಕಾದಷ್ಟು ಹಣ ಅವಳಲ್ಲಿ ಇರುವುದಿಲ್ಲ. ಹೀಗಾಗಿ ಎಲ್ಲ ಹಣವನ್ನು ಒಟ್ಟುಗೂಡಿಸಿ, ಲೆಕ್ಕ ಹಾಕುತ್ತಿರುವಾಗ ಪೂಜಾ ಬರುತ್ತಾಳೆ. ಪೂಜಾಳ ಬಳಿ, ತನ್ನ ಸಮಸ್ಯೆಯನ್ನು ಭಾಗ್ಯ ಹೇಳುತ್ತಾಳೆ. ಪೂಜಾಗೂ ಭಾಗ್ಯ ಸಮಸ್ಯೆ ಕೇಳಿ, ಕಸಿವಿಸಿಯಾಗುತ್ತದೆ. ಅಲ್ಲಿಗೆ ಫೆಬ್ರುವರಿ 12ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 714ನೇ ಸಂಚಿಕೆ ಮುಗಿಸಿದೆ. ಅತ್ತೆ ಮಾವನಿಗೆ ಅವಮಾನ ಮಾಡಿದ ಕನ್ನಿಕಾಗೆ ಭಾಗ್ಯ ತಕ್ಕ ಶಾಸ್ತಿ ಮಾಡಿದ್ದಾಳೆ, ಆದರೆ ಈಗ ತನ್ವಿ ಬರ್ತ್ಡೇ ಆಚರಿಸಲು ಅವಳಿಗೆ ದುಡ್ಡಿನ ಸಮಸ್ಯೆ ಉಂಟಾಗಿದೆ. ಹೀಗಾಗಿ ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.