Latest Kannada Nation & World
ತನ್ವಿ ಮಾತು ಕೇಳಿ ಭಾವುಕಳಾದ ಭಾಗ್ಯ; ಪ್ರೀತಿಗೆ ಸಿಕ್ಕಿದೆ ಪ್ರತಿಫಲ

ರಾತ್ರಿ ಪೂರ್ತಿ ಚೆನ್ನಾಗಿ ನಿದ್ದೆ ಮಾಡಿ ಎದ್ದ ತನ್ವಿಗೆ, ಬೆಳಿಗ್ಗೆ ಆಗುವುದೇ ತಡ ತನ್ನ ಮೊಬೈಲ್‌ನಾ ಮೊದಲು ನೋಡಬೇಕು ಎಂದೆನಿಸುತ್ತದೆ. ಎದ್ದ ತಕ್ಷಣ ಅವಳಿಗೆ ಮೊದಲು ನೆನಪಾಗಿದ್ದು ಕೂಡ ಮೋಬೈಲ್. ನಂತರ ಗುಂಡಣ್ಣ ಹೇಳಿದ ಮಾತು ನೆನಪಾಗುತ್ತದೆ. “ನೀನು ಅಮ್ಮನಿಗೆ ಖುಷಿ ಆಗುವ ರೀತಿಯಲ್ಲಿ ಎಂದೂ ನಡೆದುಕೊಂಡಿಲ್ಲ, ನೀನು ಬ್ಯಾಡ್ ಅಕ್ಕ, ಅಲ್ಲ.. ಅಲ್ಲ, ನೀನು ಬ್ಯಾಡ್ ಮಗಳು” ಎಂದಿರುತ್ತಾನೆ. ನಂತರ ಸಿಮ್ ಆಕ್ಟಿವೇಟ್ ಆಗಿರುವುದು ಅವಳ ಗಮನಕ್ಕೆ ಬರುತ್ತದೆ.