Latest Kannada Nation & World
ಆರಂಭವಾಗಿದೆ ‘ಛಾವಾ’ ಸಿನಿಮಾದ ಮುಂಗಡ ಬುಕಿಂಗ್; ಟಿಕೆಟ್ ಬೆಲೆ ದುಬಾರಿಯಾದರೂ ಕಲೆಕ್ಷನ್ ಮಾತ್ರ ಜೋರು

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಸಿನಿಮಾ, ಮುಂಗಡ ಬುಕಿಂಗ್‌ಗಳು ಆರಂಭವಾಗಿವೆ. ಟಿಕೆಟ್ ದರ ದುಬಾರಿಯಾಗಿದೆ ಎಂದು ಸಾಕಷ್ಟು ಜನ ಟ್ರೋಲ್ ಮಾಡುತ್ತಿದ್ದಾರೆ. ಛಾವಾ ಸಿನಿಮಾಕ್ಕೆ ಹೋಗುವ ಹಣದಲ್ಲಿ ಫ್ಯಾಮಿಲಿ ಎಲ್ಲ ಕೂತು ಬಿರಿಯಾನಿ ತಿನ್ನಬಹುದು ಎಂಬ ಮಾತುಗಳೂ ಕೇಳಿಬರುತ್ತಿದೆ. ಆದರೂ ಸಾಕಷ್ಟು ಜನ ಈಗಾಗಲೇ ಮುಂಗಡ ಟಿಕೆಟ್ ಬುಕ್ ಮಾಡಿದ್ದಾರೆ. ಫೆಬ್ರವರಿ 14, 2025ರಂದು ಬಿಡುಗಡೆಯಾಗಲಿರುವ ‘ಛಾವಾ’ ಸಿನಿಮಾ ಬಾಕ್ಸ್ ಆಫಿಸ್‌ನಲ್ಲೂ ಸದ್ದು ಮಾಡುವ ಎಲ್ಲ ಲಕ್ಷಣ ಕಾಣುತ್ತಿದೆ. ಸಿನಿಮಾದ ಪ್ರಚಾರವೂ ಬಲು ಜೋರಾಗಿದೆ. ರಶ್ಮಿಕಾ ತಮ್ಮ ಕಾಲಿಗೆ ಗಾಯ ಮಾಡಿಕೊಂಡಿದ್ದರೂ ಸಹ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಅದೂ ಅಲ್ಲದೆ, ರಶ್ಮಿಕಾ ಹಿಂದೆಂದೂ ಅಭಿನಯಿಸಿರದಂತಹ ಹೊಸ ಪಾತ್ರವೊಂದರಲ್ಲಿ, ರಾಣಿ ಯೇಸುಬಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ರಶ್ಮಿಕಾ ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲ ಮೂಡಿಸಿದೆ.