Latest Kannada Nation & World
ತಮಿಳುನಾಡು ದೇಗುಲ ಗರ್ಭಗುಡಿ ಪ್ರವೇಶ ವಿವಾದ; ಆತ್ಮಗೌರವದ ಪ್ರತಿಕ್ರಿಯೆ ನೀಡಿದ ಸಂಗೀತ ಮಾಂತ್ರಿಕ ಇಳಯರಾಜ
ಆತ್ಮಗೌರವದ ವಿಚಾರದಲ್ಲಿ ರಾಜಿಯಿಲ್ಲ
“ಈಗ ಹರಡಿರುವ ಸುದ್ದಿ ಸುಳ್ಳು. ಕೆಲವರು ನನ್ನ ಬಗ್ಗೆ ಸುಳ್ಳು ವದಂತಿ ಹರಡುತ್ತಿದ್ದಾರೆ. ನಾನು ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ನನ್ನ ಸ್ವಾಭಿಮಾನ ರಾಜಿ ಮಾಡಿಕೊಳ್ಳುವವನಲ್ಲ. ಆತ್ಮಗೌರವದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದರೆ, ಈಗ ಹಬ್ಬಿರುವುದು ಸುಳ್ಳುಸುದ್ದಿ. ಅಭಿಮಾನಿಗಳು ಮತ್ತು ಸಾರ್ವಜನಿಕರು ಈ ವದಂತಿ ನಂಬಬಾರದು” ಎಂದು ಸಂಗೀತ ಮಾಂತ್ರಿಕ ಇಳಯರಾಜ ತಮಿಳಿನಲ್ಲಿ ಬರೆದು ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.