Astrology
ತಾಟಕಿಯ ಎದೆಗೆ ನಾಟಿತು ರಾಮ ಬಿಟ್ಟ ಬಾಣ; ಇದು ದೇವಾನು ದೇವತೆಗಳಿಗೆ ಸಂತಸದ ಕ್ಷಣ-ramayana ramas arrow pierced tatakis chest it is a happy moment for god and goddesses smk ,ರಾಶಿ ಭವಿಷ್ಯ ಸುದ್ದಿ

ವಿಕಾರ ರೂಪ ತೋರಿದ ತಾಟಕಿ
ನೋಡಲು ವಿಕಾರವಾದ ಮುಖವುಳ್ಳ, ಅತಿಯಾದ ಎತ್ತರವಿದ್ದ, ಕೋಪದಿಂದ ಭಯಂಕರ ಸದ್ದು ಮಾಡುತ್ತಾ ಬರುವ ತಾಟಕಿಯನ್ನು ರಾಮ ಲಕ್ಷ್ಮಣರು ನೋಡುತ್ತಾರೆ. ರಾಮನು ಲಕ್ಷ್ಮಣನನ್ನು ಕುರಿತು ಇವಳು ರಾಕ್ಷಸಿಯೇ ಆದರು ಇವಳೊಬ್ಬ ಸ್ತೀ. ಆದ್ದರಿಂದ ನಾನು ಇವಳನ್ನು ಕೊಲ್ಲಲಾರೆ. ಆದ್ದರಿಂದ ಕಿವಿ ಮೂಗುಗಳನ್ನು ಕತ್ತರಿಸಿ ಇವಳು ತನ್ನ ಸ್ಥಳಕ್ಕೆ ಮರಳುವಂತೆ ಮಾಡುತ್ತೇನೆ. ರಾಮ ಲಕ್ಷ್ಮಣರು ಪರಸ್ಪರ ಮಾತನಾಡುತ್ತಿರುವಾಗಲೇ ತಾಟಕಿಯು ಜೋರಾಗಿ ಶಬ್ದ ಮಾಡುತ್ತಾ ರಾಮನ ಕಡೆ ನುಗ್ಗಿ ಬರುತ್ತಾಳೆ. ಇದನ್ನು ಕಂಡ ವಿಶ್ವಾಮಿತ್ರರು ರಾಮ ಲಕ್ಷ್ಮಣರೆ ನಿಮಗೆ ಜಯವಾಗಲಿ ಎಂದು ಜೋರಾಗಿ ಹೇಳುತ್ತಾರೆ.