Latest Kannada Nation & World
ಚಾಂಪಿಯನ್ಸ್ ಟ್ರೋಫಿ-ಮಹಿಳೆಯರ ವಿಶ್ವಕಪ್‌ನಿಂದ ಕ್ಲಬ್ ವಲ್ಡ್‌ಕಪ್‌ವರೆಗೆ; ವರ್ಷದ ಎಲ್ಲಾ ಕ್ರೀಡಾಕೂಟಗಳ ವಿವರ

ಹಲವು ಪ್ರಮುಖ ಕ್ರೀಡಾಕೂಟಗಳು ನಡೆದ 2024 ವರ್ಷ ಮುಕ್ತಾಯವಾಗಿದ್ದು, ಇದೀಗ 2025ನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. 2025ರ ಕ್ರೀಡಾ ಕ್ಯಾಲೆಂಡರ್‌ನಲ್ಲಿಯೂ ಹಲವು ಪ್ರಮುಖ ಟೂರ್ನಿಗಳು ನಡೆಯಲಿವೆ. ಕ್ರಿಕೆಟ್‌ನಲ್ಲಿ ಎರಡು ಪ್ರಮುಖ ಈವೆಂಟ್‌ಗಳು ಹೆಚ್ಚು ಗಮನ ಸೆಳೆಯಲಿವೆ. ಇದರೊಂದಿಗೆ ವಿವಿಧ ಪ್ರಕಾರಗಳ ಕ್ರೀಡೆಗಳ ಜನಪ್ರಿಯ ಈವೆಂಟ್‌ಗಳು ಕ್ರೀಡಾಭಿಮಾನಿಗಳಿಗೆ ವರ್ಷವಿಡೀ ಮನರಂಜನೆ ನೀಡಲಿದೆ. ಕ್ರಿಕೆಟ್‌ನಲ್ಲಿ ಪುರುಷರ ಚಾಂಪಿಯನ್ಸ್ ಟ್ರೋಫಿ ಮತ್ತು ಭಾರತದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಮಹತ್ವದ್ದು. ಫುಟ್ಬಾಲ್‌ನಲ್ಲಿ ಫಿಫಾ ಕ್ಲಬ್ ವಿಶ್ವಕಪ್ ನಡೆಯಲಿದೆ. ಇದೇ ಮೊದಲ ಬಾರಿಗೆ ನಡೆಯಲಿರುವ ಖೋ ಖೋ ವಿಶ್ವಕಪ್ ಗಮನ ಸೆಳೆಯಲಿದೆ.