Latest Kannada Nation & World
ತಾಯಿ ಕಾಲಿಗೆ ಬಿದ್ದು ಸತ್ಯ ಒಪ್ಪಿಕೊಳ್ಳಲು ಹೇಳಿದ ವೈಷ್ಣವ್; ಇಷ್ಟಾದ್ರೂ ಬುದ್ದಿ ಕಲಿಯೋದಿಲ್ವಾ ಕಾವೇರಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಈಗ ತುಂಬಾ ತಲೆಕಡೆಸಿಕೊಂಡಿದ್ದಾನೆ. ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು ಎಂಬುದೇ ಅವನಿಗೆ ಅರ್ಥ ಆಗುತ್ತಿಲ್ಲ. ಇನ್ನು ಕೀರ್ತಿ ಆಡಿದ ಮಾತು, ತೋರಿಸಿದ ಸಾಕ್ಷಿಯನ್ನು ನೋಡಿದರೆ ಎಂಥವರಿಗೂ ಅವಳು ಹೇಳುತ್ತಿರುವುದು ನಿಜ ಎಂದು ಅನಿಸಿಯೇ ಅನಿಸುತ್ತದೆ. ಈಗ ವೈಷ್ಣವ್‌ಗೂ ಕೂಡ ಅದೇ ರೀತಿ ಅನಿಸಿದೆ. ಹಾಗಾಗಿ ಅವನು ಕಾವೇರಿಯನ್ನು ಪ್ರಶ್ನೆ ಮಾಡುತ್ತಾ ಇದ್ದಾನೆ. “ ಅಮ್ಮ ಕೀರ್ತಿ ಹೇಳಿದ್ರಲ್ಲಿ ಒಂದಾದ್ರೂ ನಿಜ ಇದ್ಯಾ?” ಎಂದು ಹೇಳಿದ್ದಾನೆ. ಅವನು ಎಷ್ಟು ನೊಂದಿದ್ದಾನೆ ಎಂದರೆ ಅವನ ಮುಖ ನೋಡಿದರೆ ಅರ್ಥವಾಗುತ್ತದೆ ಅಷ್ಟು ನೊಂದಿದ್ದಾನೆ.