Latest Kannada Nation & World
ತಿರುಪತಿ ವಿಷ್ಣುನಿವಾಸದ ಬಳಿಕ ಕಾಲ್ತುಳಿತಕ್ಕೆ ಕನಿಷ್ಠ 4 ಸಾವು, ವೈಕುಂಠ ಏಕಾದಶಿ ಟೋಕನ್ ಪಡೆಯುವಾಗ ಸಂಭವಿಸಿದ ದುರಂತ

Tirupati stampede: ತಿರುಪತಿ ವಿಷ್ಣು ನಿವಾಸದಲ್ಲಿ ಬುಧವಾರ (ಜನವರಿ 8) ಸಂಜೆ ಕಾಲ್ತುಳಿತ ಸಂಭವಿಸಿದ್ದು, ಕನಿಷ್ಠ ನಾಲ್ವರು ಭಕ್ತರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಕಳವಳವೂ ವ್ಯಕ್ತವಾಗಿದೆ.