Latest Kannada Nation & World
ಬೆಲೆ ಏರಿಕೆ ಚಿಂತೆ ಬಿಡಿ; ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದಿದೆ ಕೇಂದ್ರ ಸರ್ಕಾರ, ರೇಟ್ ಸ್ವಲ್ಪ ಹೆಚ್ಚಾಗಲಿದೆ

ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಕಾಳುಗಳ ಸಂಭಾವ್ಯ ಬೆಲೆ ಹೀಗಿರಬಹುದು
ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಸಮಿತಿ ಭಾರತ್ ಬ್ರಾಂಡ್ ಅಕ್ಕಿ, ಹಿಟ್ಟು, ಬೇಳೆ ಕಾಳುಗಳನ್ನು ಪುನಃ ಮಾರುಕಟ್ಟೆಗೆ ಬಿಡುವ ಕುರಿತು ತೀರ್ಮಾನ ತೆಗೆದುಕೊಂಡಿದ್ದು, ದರ ಪರಿಷ್ಕರಣೆ ವಿಚಾರ ಚರ್ಚೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಸ್ತಾವನೆ ಪ್ರಕಾರ, 10 ಕೆಜಿ ಗೋಧಿ ಹಿಟ್ಟು 275 ರಿಂದ 300 ರೂ.ವರೆಗೆ ಮತ್ತು 10 ಕೆಜಿ ಅಕ್ಕಿ ಚೀಲವನ್ನು 295 ರಿಂದ 320 ರೂಪಾಯಿ ಆಗಬಹುದು.ಇದೇ ವೇಳೆ ಬೇಳೆ ಕಾಳು ಕೆಜಿಗೆ 60 ರಿಂದ 70 ರೂಪಾಯಿಗೆ ಏರಬಹುದು ಎನ್ನಲಾಗಿದೆ.