Latest Kannada Nation & World
ಬೆಂಕಿ ವದಂತಿಗೆ ಪುಷ್ಪಕ್ ಎಕ್ಸ್‌ಪ್ರೆಸ್‌ನಿಂದ ಜಿಗಿದು ಕರ್ನಾಟಕ ಎಕ್ಸ್‌ಪ್ರೆಸ್ ಅಡಿಗೆ ಬಿದ್ದ ಪ್ರಯಾಣಿಕರು, 8 ಸಾವು

ಬೆಂಕಿ ವದಂತಿಗೆ ಪುಷ್ಪಕ್ ಎಕ್ಸ್‌ಪ್ರೆಸ್‌ನಿಂದ ಜಿಗಿದು ಕರ್ನಾಟಕ ಎಕ್ಸ್‌ಪ್ರೆಸ್ ಅಡಿಗೆ ಬಿದ್ದ ಪ್ರಯಾಣಿಕರು
ರೈಲ್ವೇ ಅಧಿಕಾರಿಗಳ ಪ್ರಕಾರ, ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ರೈಲಿನ ಚಕ್ರಗಳಿಂದ ಹೊಗೆ ಹೊರಹೊಮ್ಮಿದ ನಂತರ ಬೆಂಕಿಯ ಭಯದಿಂದ ತಪ್ಪಿಸಿಕೊಳ್ಳಲು ತರಾತುರಿಯಲ್ಲಿ ಹಳಿಗಳ ಮೇಲೆ ಹಾರಿದಾಗ ಅಪಘಾತ ಸಂಭವಿಸಿದೆ. ಈ ರೈಲು ಲಕ್ನೋದಿಂದ ಮುಂಬೈಗೆ ಹೋಗುತ್ತಿತ್ತು. ಪ್ರಯಾಣಿಕರು ಏಕಾಕಿ ರೈಲು ಹಳಿಗೆ ಇಳಿದಾಗ ಎದುರುಭಾಗದಿಂದ ಬಂದ ಕರ್ನಾಟಕ ಎಕ್ಸ್‌ಪ್ರೆಸ್ ಅಡಿಗೆ ಬಿದ್ದು ಈ ದುರಂತ ಸಂಭವಿಸಿದೆ.