Astrology
ದಶರಥನಿಗೆ ವಸಿಷ್ಠರ ಬುದ್ದಿವಾದ; ವಿಶ್ವಾಮಿತ್ರರೊಂದಿಗೆ ಕಾಡಿಗೆ ತೆರಳಿದ ರಾಮ, ಲಕ್ಷ್ಮಣರು-rama and lakshmana went to the forest thinking of the opportunity to serve guru vishwamitra smk ,ರಾಶಿ ಭವಿಷ್ಯ ಸುದ್ದಿ

ವಿಶ್ವಾಮಿತ್ರರ ಈ ನಿರ್ಧಾರವು ಮೂರು ಲೋಕಗಳಲ್ಲಿ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡುತ್ತದೆ. ದೇವಾನುದೇವತೆಗಳೇ ಮುಂದೆ ಒದಗಬಹುದಾದ ತೊಂದರೆಯನ್ನು ಗ್ರಹಿಸಿ ಭಯಭೀತರಾಗುತ್ತಾರೆ. ಇದನ್ನು ಗ್ರಹಿಸಿದ ವಸಿಷ್ಠರು ದಶರಥನಿಗೆ ಬುದ್ಧಿವಾದವನ್ನು ಹೇಳಲು ಪ್ರಯತ್ನಿಸುತ್ತಾರೆ. ದಶರಥನೆ, ಕೊಟ್ಟ ಮಾತನ್ನು ತಪ್ಪದೆ ನಡೆದುಕೊಳ್ಳುವಲ್ಲಿ ನಿಮ್ಮ ವಂಶ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ನಿನ್ನಲ್ಲಿರುವ ಧೈರ್ಯಕ್ಕೆ ಕೊರತೆ ಏನೂ ಇಲ್ಲ. ಸಂಪತ್ತಿಗೂ ಸಹ ಕೊರತೆ ಇಲ್ಲ. ಆದರೆ ಒಂದು ವೇಳೆ ನೀನು ಕೊಟ್ಟ ಮಾತನ್ನು ನಡೆಸಿಕೊಡದೆ ಹೋದಲ್ಲಿ ನಿನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುವವರು ನಿನ್ನನ್ನು ಜರಿಯುತ್ತಾರೆ. ಅಷ್ಟು ಮಾತ್ರವಲ್ಲದೆ ಜನೋಪಕಾರಿ ಕೆಲಸ ಕಾರ್ಯಗಳಿಂದ ಗಳಿಸಿರುವ ಪುಣ್ಯದ ಫಲಗಳು ನಾಶವಾಗುತ್ತವೆ. ನೀನು ಮಾಡಿದ ಅಶ್ವಮೇಧ ಮತ್ತು ಇನ್ನಿತರ ಯಾಗಾದಿಗಳು ಸತ್ವಹೀನವಾಗುತ್ತವೆ. ಅದರ ಫಲವು ನಿನಗೆ ದೊರೆಯದಾಗುತ್ತದೆ.