Astrology
ದೀಪ ತರಂಗಗಳು ಎಂದರೇನು, ಇದು ನಮ್ಮ ಮನಸ್ಸಿನ ಮೇಲೆ ಹೇಗೆಲ್ಲಾ ಸಕಾರಾತ್ಮಕ ಪರಿಣಾಮ ಬೀರುತ್ತೆ?

ದೇವರ ಕೋಣೆಯಲ್ಲಿ ಬೆಳಗುವ ಒಂದು ದೀಪವು ಮನಸ್ಸಿನಲ್ಲಿ ಆಧಾತ್ಮಿಕ ಭಾವವನ್ನು ಹುಟ್ಟುವುದು ಹಾಕುವುದು ಮಾತ್ರವಲ್ಲ, ಇದು ನಮ್ಮೊಳಗಿನ ಭಯ, ಆತಂಕ ದೂರಾಗಿಸಿ ನಮ್ಮ ಮನಸ್ಸಿನಲ್ಲಿ ಧೈರ್ಯ, ಛಲ ಹುಟ್ಟಿಸುತ್ತದೆ. ಅಜ್ಞಾನವನ್ನ ಕಳೆಯುವ ದೀಪದ ಅಲೆಯು ನಮ್ಮ ಸುತ್ತಲೂ ಧನಾತ್ಮಕ ಅಂಶವನ್ನು ಸೃಷ್ಟಿಸುತ್ತದೆ. ಕತ್ತಲೆ ನೋಡಿ ಭಯಪಟ್ಟ ಮನಸ್ಸಿಗೆ ಬೆಳಕು ಸಾಂತ್ವನ ನೀಡುತ್ತದೆ. ಹೀಗೆ ಒಂದು ದೀಪವು ಮನುಷ್ಯನ ಬದುಕಿಗೆ ಹಲವು ರೀತಿಯಲ್ಲಿ ಬೆಳಕಿನ ಅಲೆ ಅಥವಾ ತರಂಗವನ್ನು ಹರಡುವಂತೆ ಮಾಡುತ್ತದೆ.