Latest Kannada Nation & World
ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಭಜನೆ; ಮಿಲಿಯನ್ ವೀಕ್ಷಣೆಗೊಳಪಟ್ಟ ವಿಡಿಯೋ

ಒಂದಷ್ಟು ಜನ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಾ ಇರುತ್ತಾರೆ. ಅದೇ ಸಂದರ್ಭದಲ್ಲಿ ಎಲ್ಲರೂ ಡೋಲಕ್ ಹಾಗೂ ತಾಳಗಳನ್ನು ಹಿಡಿದುಕೊಂಡು ಭಜನೆ ಮಾಡಲು ಆರಂಭಿಸುತ್ತಾರೆ. ಭಜನೆ ಮಾಡುತ್ತಾ ಮಾಡುತ್ತಾ ಏರುಧ್ವನಿಯಲ್ಲಿ ಎಲ್ಲರಿಗೂ ಕೇಳುವಂತೆ ಭಜನೆ ಮಾಡುತ್ತಾ ಇರುತ್ತಾರೆ. ಇನ್ನು ಸೀಟ್ ಸಿಗದೇ ಇದ್ದ ಕೆಲವರು ನೆಲದ ಮೇಲೆ ಕುಳಿತುಕೊಂಡು ಡೋಲಕ್ ಭಾರಿಸುತ್ತಾ ಇರುತ್ತಾರೆ. ಅದೇ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನಿತರರು ಅವರನ್ನು ನೋಡುತ್ತಾ ಇರುತ್ತಿದ್ದರೆ, ಇನ್ನು ಕೆಲವರು ವಿಡಿಯೋ ಮಾಡಿಕೊಳ್ಳುತ್ತಾರೆ.