Latest Kannada Nation & World
ನಂದಿನಿ ಟ್ರಂಕ್ ಮೇಲೆ ವಿಜಯಾಂಬಿಕಾ ಕಣ್ಣು; ಮುಂದಾಗುವ ಅಪಾಯದ ಅರಿವಿಲ್ಲದ ಸುಬ್ಬು–ಶ್ರಾವಣಿ ಜಾಲಿರೈಡ್; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಕಾರಿನಲ್ಲಿ ಸುಬ್ಬು ಜಾಲಿ ಮೂಡ್, ಶ್ರಾವಣಿಗೆ ಮೈ ಉರಿ
ಕಾರಿನಲ್ಲಿ ಇಬ್ಬರು ಆರಾಮಾಗಿ ಹೋಗುತ್ತಿರುವಾಗ ಮದರ್ ಸೆಂಟಿಮೆಂಟ್ ಹಾಡನ್ನು ಹಾಕುತ್ತಾನೆ ಸುಬ್ಬು. ಆದರೆ ಶ್ರಾವಣಿಗೆ ರೊಮ್ಯಾಂಟಿಕ್ ಹಾಡು ಕೇಳುವಾಸೆ, ಅದು ಸುಬ್ಬು ಬಾಯಿಂದ. ಅಷ್ಟೊತ್ತಿಗೆ ಸುಬ್ಬು ಮನೆಗೆ ಕಾಲ್ ಮಾಡಬೇಕು ಎಂದು ನೆನಪಾಗಿ, ಅಮ್ಮ, ಅಕ್ಕ, ವರ ಎಲ್ಲರಿಗೂ ಕಾಲ್ ಮಾಡುವಂತೆ ಶ್ರಾವಣಿಗೆ ಹೇಳುತ್ತಾನೆ. ಅವರು ಯಾರೂ ಕಾಲ್ ತೆಗೆಯದೇ ಕೊನೆಗೆ ಶ್ರೀವಲ್ಲಿ ಕಾಲ್ ಮಾಡಲು ಹೇಳುತ್ತಾನೆ. ಇದರಿಂದ ಶ್ರಾವಣಿ ಉರಿದು ಬೀಳುತ್ತಾಳೆ. ಅದರಲ್ಲೂ ಶ್ರೀವಲ್ಲಿ ಮಾತು ಕೇಳಿದ ಮೇಲೆ ಅವಳ ಕೋಪ ಇನ್ನಷ್ಟು ಹೆಚ್ಚಾಗುತ್ತದೆ. ಕಾರಿನಲ್ಲಿ ಹೋಗುವಾಗ ತನ್ನ ಶಾಲಾ ದಿನಗಳ ಬಗ್ಗೆ ಹೇಳುವ ಸುಬ್ಬು ತನಗೆ ಗೆಳೆಯರಿಗಿಂತ ಗೆಳತಿಯರೇ ಹೆಚ್ಚು ಎಂದು ಹೇಳಿ ಶ್ರಾವಣಿ ಇನ್ನಷ್ಟು ಉರಿದು ಬೀಳುವಂತೆ ಮಾಡುತ್ತಾನೆ. ಆದರೆ ಸುಬ್ಬುಗೆ ಶ್ರಾವಣಿಯ ಯಾವ ಮಾತುಗಳು ಅವಳಿಗೆ ತನ್ನ ಮೇಲೆ ಪ್ರೀತಿ ಇದೆ ಎಂಬುದು ಅರ್ಥವಾಗುವಂತೆ ಮಾಡುವುದಿಲ್ಲ.