Latest Kannada Nation & World
ನಗದು ವಹಿವಾಟು ಮಾಡುವವರಿಗೆ ಆದಾಯ ತೆರಿಗೆ ಇಲಾಖೆಯಿಂದ ಎಚ್ಚರಿಕೆ, ಈ 5 ಕ್ಯಾಶ್ ವಹಿವಾಟಿಗೆ ಶೇ 100 ದಂಡ
ತೆರಿಗೆ ಇಲಾಖೆಯು ನಗದು ವಹಿವಾಟಿನ ಮೇಲಿನ ಕುಣಿಕೆ ಬಿಗಿಗೊಳಿಸುವ ಪ್ರಯತ್ನ ನಡೆಸುತ್ತಿದೆ. ಇದೇ ಕಾರಣಕ್ಕೆ ಆದಾಯ ತೆರಿಗೆ (ಐಟಿ) ಇಲಾಖೆಯು ಕೆಲವು ನಗದು ವಹಿವಾಟಿಗೆ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರ ಪತ್ರಿಕೆ ದಿ ಮಿಂಟ್ ವರದಿ ಮಾಡಿದೆ. ಬ್ಯಾಂಕ್‌ಗಳು, ಮ್ಯೂಚುಯಲ್ ಫಂಡ್‌ಗಳಂತಹ ಜನಪ್ರಿಯ ಹೂಡಿಕೆ ತಾಣಗಳು ನಗದು ವಹಿವಾಟಿಗೆ ನಿರುತ್ಸಾಹ ತೋರುತ್ತಿವೆ. ಈ ಮೂಲಕ ಸಾಮಾನ್ಯ ಜನರಿಗೆ ನಗದು ವಹಿವಾಟು ನಡೆಸಲು ನಿಯಮಗಳನ್ನು ಬಿಗಿಗೊಳಿಸುವ ಪ್ರಯತ್ನ ನಡೆಯುತ್ತಿದೆ.