Latest Kannada Nation & World
ನಟ ದರ್ಶನ್ ಬರ್ತ್ಡೇಗೆ ಪತ್ನಿ ವಿಜಯಲಕ್ಷ್ಮೀ ಕಡೆಯಿಂದ ‘ಬ್ಲಾಕ್ ಹಾರ್ಟ್’ ಶುಭಾಶಯ, ಏನಿದರ ಅರ್ಥ?

Darshan Birthday: ಸ್ಯಾಂಡಲ್ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ಡೇ ಸಂಭ್ರಮದಲ್ಲಿದ್ದಾರೆ. ಪ್ರತಿ ವರ್ಷ ತಮ್ಮ ಅಭಿಮಾನಿಗಳ ಜತೆಗೆ ಗ್ರ್ಯಾಂಡ್ ಆಗಿಯೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ದರ್ಶನ್, ಈ ವರ್ಷ ಮಾತ್ರ ಅದರಿಂದ ದೂರ ಉಳಿದಿದ್ದಾರೆ. ಅದಕ್ಕೆ ಕಾರಣ ಕರುನಾಡಿನ ಜನಕ್ಕೂ ತಿಳಿದಿದೆ. ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಪತ್ನಿ, ಪುತ್ರನಿಂದಲೂ ಶುಭಾಶಯ ಸಂದಾಯವಾಗಿದೆ.