Latest Kannada Nation & World
ನನ್ನ ಅಡುಗೆ ಭಯಾನಕ, ಅದಕ್ಕೆ ನಾರಾಯಣ ಮೂರ್ತಿ ತೂಕ ಇಷ್ಟಿದೆ! ಕಪಿಲ್ ಶೋನಲ್ಲಿ ಸುಧಾ ಮೂರ್ತಿ ಬಿಚ್ಚಿಟ್ರು ಕಿಚನ್ ಸೀಕ್ರೇಟ್

ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಶನಿವಾರದ ಸಂಚಿಕೆಯಲ್ಲಿ ಇನ್ಫೋಸಿಸ್ ಸಹ ಸ್ಥಾಪಕ ನಾರಾಯಣ ಮೂರ್ತಿ ಮತ್ತು ತನ್ನ ಸಮಾಜಸೇವೆ, ಬರಹ, ಇನ್ಫೋಸಿಸ್ ಫೌಂಡೇಶನ್ ಕಾರ್ಯಗಳಿಂದ ಜನಪ್ರಿಯತೆ ಪಡೆದ ಸುಧಾ ಮೂರ್ತಿಯವರ ಬದುಕಿನ ಪ್ರೀತಿಯ ಕಥೆಗಳನ್ನು ಕೇಳಿ ಕಿರುತೆರೆ ಪ್ರೇಕ್ಷಕರು ಖುಷಿಯಾಗಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಸುಧಾ ಮೂರ್ತಿಯವರು ತಮ್ಮ ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಬದುಕಿನ ಅನೇಕ ವಿಚಾರಗಳನ್ನು ಈ ಶೋನಲ್ಲಿ ಬಿಚ್ಚಿಟ್ಟಿದ್ದಾರೆ. ನಾನಾಗ ಟೆರ್ರಿಬಲ್, ಭಯಾನಕ ಅಡುಗೆ ಮಾಡುತ್ತಿದ್ದೆ ಎಂದು ಸುಧಾಮೂರ್ತಿ ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ, ನನ್ನ ಅಡುಗೆ ಚೆನ್ನಾಗಿಲ್ಲದೆ ಇದ್ದರೂ ನನ್ನ ಪಾಕ ಪ್ರಯತ್ನಗಳನ್ನು ನಾರಾಯಣ ಮೂರ್ತಿ ಮೆಚ್ಚುತ್ತಿದ್ದರು ಎಂದು ಸುಧಾ ಮೂರ್ತಿ ಹೇಳಿದ್ದಾರೆ.