Latest Kannada Nation & World
ನನ್ನ ಸಿನಿಮಾಗೆ ಪ್ರಚಾರ ಸಿಗುತ್ತೆ ನೀನು ಸೂಸೈಡ್ ಮಾಡ್ಕೊ ಅಂತ ಡಾಲಿ ಧನಂಜಯ್‌ಗೆ ಹೇಳಿದ ಆ ನಿರ್ದೇಶಕ ಯಾರು? ಹಳೆ ವಿಡಿಯೋ ವೈರಲ್

ಕಾರಿನಲ್ಲಿ ಕುಳಿತು ಸೆಲ್ಫಿ ವಿಡಿಯೋ ಮಾಡಿರುವ ಧನಂಜಯ್, ನಾನು ಪ್ರತಿಯೊಂದು ವಿಚಾರವನ್ನ ಹೇಳಲು ಇಷ್ಟಪಡುವುದಿಲ್ಲ. ನಿಮ್ಮಿಂದ ಆದ ಒಂದೇ ಒಂದು ಕೆಟ್ಟ ಅನುಭವವನ್ನು ಇಲ್ಲಿ ಹೇಳಿಕೊಳ್ಳಲು ಬಯಸುತ್ತೇನೆ. ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮಕ್ಕಾಗಿ ನೀವು ಚೆನ್ನೈಗೆ ಹೋಗುತ್ತಿದ್ದೀರಿ. ಆಗ ಡೈರೆಕ್ಟರ್ ಸ್ಪೆಷಲ್ ಚಿತ್ರದ ಒಂದೇ ಒಂದು ಹಾಡಿನ ಒಂದು ಶಾಟ್‌ನಲ್ಲಿ ನಾನು ನಟಿಸಬೇಕಿತ್ತು. ಅದೊಂದು ಶಾಟ್‌ಗಾಗಿ ಗಡ್ಡ, ಮೀಸೆ ಬಿಟ್ಟುಕೊಂಡು 8 ತಿಂಗಳು ಕಾದಿದ್ದೆ. ನೀವು ಚೆನ್ನೈನಿಂದ ವಾಪಸ್ ಆದ ನಂತರ ನಿಮ್ಮ ಬಳಿ ಬಂದು ಗುರುಗಳೇ ನನಗೆ ಬಹಳ ಹಿಂಸೆ ಆಗುತ್ತಿದೆ, ಗಡ್ಡ ಕೂದಲು ಬಿಟ್ಟು 4-5 ವರ್ಷ ಆಯ್ತು , ದಯವಿಟ್ಟು ಅದೊಂದು ಹಾಡಿನ ಶೂಟಿಂಗ್ ಮುಗಿಸಿಕೊಡಿ ಎಂದು ಕೇಳಿದ್ದಕ್ಕೆ ಹಿಂಸೆ ಆಗ್ತಿದ್ಯಾ ಧನಂಜಯ್, ಹಾಗಾದ್ರೆ ಸೂಸೈಡ್ ಮಾಡ್ಕೊಳಿ ನನ್ನ ಸಿನಿಮಾಗೆ ಪ್ರಚಾರ ಸಿಗುತ್ತೆ ಎಂದು ಹೇಳಿದ್ರಿ.