Latest Kannada Nation & World
ನಮ್ಮದಲ್ಲ, ಅವರದ್ದೇ ತಪ್ಪು; ರಚಿನ್ ರವೀಂದ್ರ ಅವರ ಗಂಭೀರ ಗಾಯಕ್ಕೆ ಅವರೇ ಕಾರಣ ಎಂದು ದೂಷಿಸಿದ ಪಾಕಿಸ್ತಾನ

ಕಾಲು ಜಾರಿರಬಹುದು ಎಂದ ಮಾಜಿ ಕ್ರಿಕೆಟಿಗ
ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ ಎಸೆತಗಳಲ್ಲಿ ನ್ಯೂಜಿಲೆಂಡ್ ಆಟಗಾರರು ಸಿಕ್ಸರ್ ಬಾರಿಸಿದಾಗ, ದೀಪಗಳು ಕೆಲಸ ಮಾಡುತ್ತಿರಲಿಲ್ಲವೇ? 70 ಮೀಟರ್ ದೂರದಲ್ಲಿ ನಿಂತಿದ್ದ ರಚಿನ್ ಚೆಂಡನ್ನು ಅಂದಾಜಿಸಲು ವಿಫಲವಾಗಿ ಕ್ಯಾಚ್ ಪಡೆಯಲು ವಿಫಲರಾದನು. ಅವರು ಉತ್ತಮ ಫೀಲ್ಡರ್. ಆದರೆ ಆ ಅವಧಿಯಲ್ಲಿ ಬಹುಶಃ ಅವರು ಕಾಲು ಜಾರಿರಬಹುದು ಎಂದು ಸಲ್ಮಾನ್ ಸ್ಥಳೀಯ ಸುದ್ದಿ ಚಾನೆಲ್ನಲ್ಲಿ ಹೇಳಿದ್ದಾರೆ. ಇದೇ ವೇಳೆ ಪಾಕಿಸ್ತಾನದ ಮತ್ತೊಬ್ಬ ಸುದ್ದಿ ನಿರೂಪಕನೊಬ್ಬ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕಟಕ್ ಪಂದ್ಯದಲ್ಲಿ ಫ್ಲಡ್ಲೈಟ್ಗಳ ಸಮಸ್ಯೆ ಕಾರಣ 30 ನಿಮಿಷಗಳ ಕಾಲ ಪಂದ್ಯ ಸ್ಥಗಿತಗೊಂಡಿದ್ದನ್ನು ಉಲ್ಲೇಖಿಸಿದ್ದರು. ಪಿಸಿಬಿಯಂತೆ, ಬಿಸಿಸಿಐ ಕೂಡ ಸಾರ್ವಜನಿಕ ಹಿನ್ನಡೆಯನ್ನು ಎದುರಿಸಿತ್ತು.