Latest Kannada Nation & World
ನಮ್ಮಿಂದ ಸಂಬಳ ತಗೊಂಡ್ ನಮಗೇ ಹೇಳ್ತೀರಾ; ಭಾರತ ತಂಡವನ್ನು ಟೀಕಿಸಿದರಿಗೆ ಬೆಂಡೆತ್ತಿದ ಸುನಿಲ್ ಗವಾಸ್ಕರ್

ಟೀಕಿಸಿದವರಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸುನಿಲ್ ಗವಾಸ್ಕರ್
ಇಂಡಿಯಾ ಟುಡೇ ಜೊತೆ ಮಾತನಾಡಿದ ಸುನಿಲ್ ಗವಾಸ್ಕರ್, ‘ಈ ಬಗ್ಗೆ ಬಾಯಿಗೆ ಬಂದಂತೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ಪಿಚ್ಗಳು ಭಾರತದ ನಿಯಂತ್ರಣದಲ್ಲಿಲ್ಲದ ಕಾರಣ ಮತ್ತು ಪಂದ್ಯಗಳ ಸಮಯದಲ್ಲಿ ಪ್ರಯಾಣ ಸಾಮಾನ್ಯವಾಗಿರುವುದರಿಂದ ಇದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ತಿಳಿಸಿದ್ದಾರೆ. ‘ಗುಣಮಟ್ಟ, ಆದಾಯ, ಪ್ರತಿಭೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಗಳಿಸಿದ ಆದಾಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನ ವಿಷಯದಲ್ಲಿ ಭಾರತ ಎಲ್ಲಿದೆ ಎಂದು ಅವರಿಗೆ ಅರ್ಥವಾಗುವುದಿಲ್ಲ. ದೂರದರ್ಶನ ಹಕ್ಕುಗಳು ಮತ್ತು ಮಾಧ್ಯಮ ಹಕ್ಕುಗಳ ಮೂಲಕ ಜಾಗತಿಕ ಕ್ರಿಕೆಟ್ಗೆ ಭಾರತದ ಕೊಡುಗೆ ದೊಡ್ಡ ಪಾತ್ರ ವಹಿಸುತ್ತದೆ. ಭಾರತವು ಕ್ರಿಕೆಟ್ ಜಗತ್ತಿಗೆ ಏನು ಕೊಡುಗೆ ನೀಡುತ್ತಿದೆಯೋ ಅದರಿಂದ ಅವರಿಗೆ ಸಂಬಳವೂ ಬರುತ್ತಿದೆ ಎಂಬುದು ನೆನಪಿರಲಿ. ಇದನ್ನು ಅವರು ಅರ್ಥಮಾಡಿಕೊಳ್ಳುವುದು ಉತ್ತಮ’ ಎಂದಿದ್ದಾರೆ.