Latest Kannada Nation & World
ನಮ್ಮ ಸಂಬಂಧ ಇಲ್ಲಿಗೆ ಮುಗಿಯಿತು, ನನ್ನಿಂದ ದೂರ ಹೋಗು ಎಂದು ಜಯಂತ್‌ಗೆ ಎಚ್ಚರಿಸಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

ವೈದ್ಯರ ಬಳಿ ಅನುಮತಿ ಕೇಳಿದ ಜಯಂತ್
ಜಾಹ್ನವಿಯನ್ನು ಇನ್ನೂ ಎರಡು ಮೂರು ದಿನ ಇಲ್ಲಿಯೇ ಉಳಿಸಿಕೊಳ್ಳಬೇಕಾಗುತ್ತದೆ ಎಂದು ಅವಳನ್ನು ಪರೀಕ್ಷಿಸಿದ ವೈದ್ಯರು ಹೇಳುತ್ತಾರೆ, ಅದಕ್ಕೆ ಜಯಂತ್ ಪರಿಪರಿಯಾಗಿ ವಿನಂತಿಸಿಕೊಳ್ಳುತ್ತಾ, ದಯವಿಟ್ಟು ಹಾಗೆ ಮಾಡಬೇಡಿ, ಅವಳನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ, ಅವಳ ಮನೆಯವರು ಬಂದು ಕಾದು ಕುಳಿತಿದ್ದಾರೆ, ಅವರಿಗೆ ವಿಷಯ ತಿಳಿದಿಲ್ಲ ಎಂದು ಹೇಳುತ್ತಾನೆ. ಕೊನೆಗೆ, ವೈದ್ಯರು, ಅವಳಿಗೆ ಏನಾದರೂ ತೊಂದರೆಯಾದರೆ, ಹೆಚ್ಚುಕಮ್ಮಿಯಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಎಚ್ಚರಿಸುತ್ತಾರೆ. ಬಳಿಕ, ಮನೆಗೆ ಕರೆದುಕೊಂಡು ಹೋಗಿ, ಡಿಸ್ಚಾರ್ಜ್ ಮಾಡಿ ಎಂದು ಹೇಳುತ್ತಾರೆ. ಅದರಂತೆ ಜಯಂತ್, ಜಾಹ್ನವಿಯನ್ನ ಕರೆದುಕೊಂಡು ಮನೆಗೆ ಹೋಗುತ್ತಾನೆ.